
1.ಕಿಶೋರಿ ಬಲ್ಲಾಳ್ :

ಬಾಲಿವುಡ್ನಲ್ಲೂ ಮಿಂಚಿ ಕನ್ನಡ ಚಿತ್ರರಂಗದಲ್ಲಿ ಮನೆ ಮಾತಾಗಿದ್ದ ಹಿರಿಯ ನಟಿ ಕಿಶೋರಿ ಬಲ್ಲಾಳ್ ಫೆಬ್ರವರಿ 2020ರಂದು ವಿಧಿವಶರಾಗಿದ್ದರು. 1960ರಿಂದ ಕನ್ನಡ ಚಿತ್ರರಂಗಕ್ಕೆ ಪ್ರವೇಶ ಮಾಡಿದ್ದ ಕಿಶೋರಿ ಬಲ್ಲಾಳ್ ತಮ್ಮ 15 ವರ್ಷಗಳ ಸಿನಿಮಾ ಜರ್ನಿಯಲ್ಲಿ 75ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿದ್ದಾರೆ.
ಕರ್ನಾಟಕದವರೇ ಆದ ಕಿಶೋರಿ ಬಲ್ಲಾಳ್ ಭರತನಾಟ್ಯ ಪ್ರವೀಣ ಎನ್ ಶ್ರೀಪತಿ ಬಲ್ಲಾಳ್ರನ್ನು ವರಿಸಿದ್ದರು. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಇವರು ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದರು. ಕೊನೆಯದಾಗಿ ಇವರು ಕನ್ನಡದ ಕಹಿ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರು.
2. ಬುಲೆಟ್ ಪ್ರಕಾಶ್

ಚಂದನವನದ 75ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿದ್ದ ಪ್ರಕಾಶ್ 2020ರ ಮಾರ್ಚ್ 31ರಂದು ಯಕೃತ್ತು ಹಾಗೂ ಕಿಡ್ನಿ ಸಮಸ್ಯೆಯಿಂದಾಗಿ ದೈವಾಧೀನರಾದರು. ಸದಾ ರಾಯಲ್ ಎನ್ಫೀಲ್ಡ್ ಬೈಕ್ನಲ್ಲೇ ಸುತ್ತುತ್ತಿದ್ದ ಪ್ರಕಾಶ್ ಇದೇ ಕಾರಣಕ್ಕೆ ಬುಲೆಟ್ ಪ್ರಕಾಶ್ ಎಂದು ಚಿರಪರಿಚಿತರಾಗಿದ್ದರು.
3. ಮೈಕೆಲ್ ಮಧು

ಓಂ, ಶ್, ಎಕೆ 47 ಹಾಗೂ ಇತ್ತೀಚೆಗೆ ತೆರೆ ಕಂಡ ಫ್ರೆಂಚ್ ಬಿರಿಯಾನಿ ಇವೆಲ್ಲ ಮೈಕೆಲ್ ಮಧುರಿಗೆ ಹೆಸರು ತಂದುಕೊಟ್ಟಂತಹ ಸಿನಿಮಾಗಳು. ಹೃದಯಾಘಾತಕ್ಕೆ ಒಳಗಾಗಿದ್ದ ಮೈಕಲ್ ಮಧು 2020ರ ಮೇ 13ರಂದು ಕೊನೆಯುಸಿರೆಳೆದಿದ್ದರು.
4. ಚಿರಂಜೀವಿ ಸರ್ಜಾ

ಚಿತ್ರರಂಗದಲ್ಲಿ ಮಿಂಚುತ್ತಿದ್ದ ಸಂದರ್ಭದಲ್ಲೇ ಅವರು ಉಸಿರಾಟದ ತೊಂದರೆ ಸೇರಿದಂತೆ ವಿವಿಧ ಸಮಸ್ಯೆಗಳಿಂದಾಗಿ ಜೂನ್ 7ರಂದು ಹಠಾತ್ ನಿಧನರಾಗಿದ್ದರು. ಚಿರಂಜೀವಿ ಸರ್ಜಾ ನಿಧನರಾದ ಬಳಿಕ ಅವರಿಗೆ ಗಂಡು ಮಗು ಜನಿಸಿತ್ತು. ಗಂಡು ಮಗುವಿಗೆ ಪತ್ನಿ ಹಾಗೂ ನಟಿ ಮೇಘನಾ ರಾಜ್, ರಾಯನ್ ರಾಜ್ ಸರ್ಜಾ ಎಂದು ನಾಮಕರಣ ಮಾಡಿದ್ದರು.
5. ಶಾಂತಮ್ಮ

ಶಾಂತಮ್ಮ 400ಕ್ಕೂ ಅಧಿಕ ಸಿನಿಮಾಗಳಲ್ಲಿ ತಮ್ಮ ನಟನಾ ಚಾಕಚಕ್ಯತೆಯನ್ನು ತೋರಿದ್ದಾರೆ. 1965ರಲ್ಲಿ ಹರಿ ಭಕ್ತ ಸಿನಿಮಾ ಮೂಲಕ ನಟನಾ ವೃತ್ತಿ ಆರಂಭಿಸಿದ್ದ ಶಾಂತಮ್ಮ ಬಳಿಕ ಹಿಂದಿ ಹಾಗೂ ತಮಿಳು ಚಿತ್ರರಂಗಳಲ್ಲಿಯೂ ಮಿಂಚಿದ್ದರು. ಒಳ್ಳೆಯ ನಟನಾ ಪ್ರತಿಭೆ ಇದ್ದರೂ ಸಹ ಒಂದು ಸಮಯದಲ್ಲಿ ಶಾಂತಮ್ಮ ತೀವ್ರ ಆರ್ಥಿಕ ಸಂಕಷ್ಟಕ್ಕೆ ಗುರಿಯಾಗಿದ್ದರು. ಮಕ್ಕಳ ಚಿಕಿತ್ಸೆಗಾಗಿ ರಾಜ್ಯ ಸರ್ಕಾರದ ಬಳಿ ಧನಸಹಾಯಕ್ಕೆ ಮನವಿಯನ್ನೂ ಮಾಡಿದ್ದರು. ವಯೋ ಸಹಜ ಕಾಯಿಲೆಗಳಿಂದ ಬಳಲುತ್ತಿದ್ದ ಶಾಂತಮ್ಮ 95 ವರ್ಷ ವಯಸ್ಸಿನಲ್ಲಿ ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.
6. ಸುಧಾಕರ್

ಟಗರು, ಪಂಚರಂಗಿ ಹಾಗೂ ಪಾಪ್ಕಾರ್ನ್ ಮಂಕಿ ಟೈಗರ್ ಸಿನಿಮಾಗಳು ಇವರಿಗೆ ಹೆಚ್ಚಿನ ಹೆಸರು ತಂದುಕೊಟ್ಟಿವೆ. ಶುಗರ್ಲೆಸ್ ಸಿನಿಮಾ ಶೂಟಿಂಗ್ ವೇಳೆ ಕುಸಿದುಬಿದ್ದ ಸುಧಾಕರ್ರನ್ನು ಕೂಡಲೇ ಆಸ್ಪತ್ರೆಗೆ ಕರೆದಕೊಂಡು ಹೋಗಲಾಗಿತ್ತು. ಆದರೂ ಅವರು 2020ರ ಸೆಪ್ಟೆಂಬರ್ 24ರಂದು ಸಾವಿಗೀಡಾದರು.
7. ಸಿದ್ದರಾಜ್ ಕಲ್ಯಾಣಕರ್

8. ಕೊಡಗನೂರು ಜಯಕುಮಾರ್

9. ಬಿ . ಜಯಾ

10. ಸುರೇಶ್ ಚಂದ್ರ

11. ಸಂಚಾರಿ ವಿಜಯ್

12. ಜಯಂತಿ
ಅಭಿಮಾನಿಗಳ ಪಾಲಿಗೆ ಅಭಿನಯ ಶಾರದೆ ಎನಿಸಿಕೊಂಡಿದ್ದ ಬಹುಭಾಷಾ ನಟಿ ಜಯಂತಿ ಕೂಡ ಇದೇ ವರ್ಷ ಅಭಿಮಾನಿಗಳನ್ನು ಅಗಲಿದ್ದಾರೆ. ಡಾ. ರಾಜ್ಕುಮಾರ್ ಜೊತೆಯಲ್ಲಿಯೇ 45 ಸಿನಿಮಾಗಳಲ್ಲಿ ನಟಿಸಿದ್ದ ನಟಿ ಜಯಂತಿ ಕನ್ನಡದಲ್ಲಿ 190 ಸಿನಿಮಾಗಳು ಹಾಗೂ ದಕ್ಷಿಣ ಭಾರತದಲ್ಲಿ 500ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿದಂತವರು.
ಭಾರತ ಚಿತ್ರರಂಗದ ಮತ್ತೊಬ್ಬ ಅತ್ಯುನ್ನತ ನಟ ಎನ್ಟಿಆರ್ ಜೊತೆಯಲ್ಲೂ ಅಭಿನಯಿಸಿದ ಕೀರ್ತಿ ಅವರದ್ದು.76 ವರ್ಷ ಪ್ರಾಯದವರಾಗಿದ್ದ ನಟಿ ಜಯಂತಿ ತಮ್ಮ ನಿವಾಸದಲ್ಲಿಯೇ ಜುಲೈ 26ರಂದು ವಿಧಿವಶರಾಗಿದ್ದರು.
ಇನ್ನುಳಿದಂತೆ ಜಿ.ಕೆ. ಗೋವಿಂದ ರಾವ್, ಸತ್ಯಜಿತ್, ಶಂಖನಾದ ಅರವಿಂದ್ ಸೇರಿದಂತೆ ಇನ್ನೂ ಅನೇಕರು ಇಹಲೋಕ ಯಾತ್ರೆ ಮುಗಿಸಿದ್ದಾರೆ.