ದೇಶದ ಸಾರ್ವಜನಿಕ ಕ್ಷೇತ್ರದ ಅತಿ ದೊಡ್ಡ ಬ್ಯಾಂಕ್ ಆದ ಭಾರತೀಯ ಸ್ಟೇಟ್ ಬ್ಯಾಂಕ್ (ಎಸ್‌ಬಿಐ) ತನ್ನ ಗ್ರಾಹಕರ ಅನುಕೂಲಕ್ಕೆ ಬಹಳಷ್ಟು ಸೇವೆಗಳನ್ನು ಪರಿಚಯಿಸಿದೆ.
ಇದೀಗ ತನ್ನ ಹೊಸ ಟೋಲ್ ಫ್ರೀ ಸಂಖ್ಯೆ 1800 1234ಗೆ ಕರೆ ಮಾಡುವ ಮೂಲಕ ಗ್ರಾಹಕರು ಮನೆಯಲ್ಲೇ ಕುಳಿತು ಅನೇಕ ಸವಲತ್ತುಗಳನ್ನು ಪಡೆಯಬಹುದಾಗಿದೆ.
ಉದ್ಯೋಗಾಕಾಂಕ್ಷಿಗಳಿಗೆ ಗುಡ್ ನ್ಯೂಸ್: ಕೆಪಿಟಿಸಿಎಲ್, ಎಸ್ಕಾಂಗಳಲ್ಲಿ 1492 ಹುದ್ದೆಗಳ ನೇಮಕಾತಿ
“ಮನೆಯಲ್ಲೇ ಸುರಕ್ಷಿತವಾಗಿ ಇರಿ, ನಾವು ನಿಮ್ಮ ಸೇವೆಗಾಗಿ ಇದ್ದೇವೆ. ಭಾರತೀಯ ಸ್ಟೇಟ್ ಬ್ಯಾಂಕ್ ನಿಮಗೆ ಸಂಪರ್ಕರಹಿತ ಸೇವೆ ನೀಡಲಿದ್ದು, ನಿಮಗೆ ತುರ್ತು ಬ್ಯಾಂಕಿಂಗ್ ಅಗತ್ಯತೆಗಳಿಗೆ ಇದು ಸಹಾಯವಾಗಲಿದೆ,” ಎಂದು ಎಸ್‌ಬಿಐ ಟ್ವೀಟ್ ಮಾಡಿದೆ.
ಈ ಸೇವೆಯ ಮೂಲಕ ನೀವು:
ಐವಿಆರ್ ಮೂಲಕ ಕಳೆದ 5 ವ್ಯವಹಾರಗಳನ್ನು ಪರೀಕ್ಷಿಸಬಹುದು
ಎಸ್‌ಎಂಎಸ್ ಮೂಲಕ ಮಾಡಿದ ಕಳೆದ 5 ವ್ಯವಹಾರಗಳನ್ನು ಮಾಡಬಹುದು.
ಎಟಿಎಂ ಕಾರ್ಡ್ ಮರುವಿತರಣೆ ಹಾಗೂ ಬ್ಲಾಕಿಂಗ್‌ಗಾಗಿ ಮನವಿ ಮಾಡಬಹುದು.
ಎಟಿಂಎ/ಗ್ರೀನ್ ಪಿನ್ ಸೃಷ್ಟಿಸಬಹುದು.
ಹಳೆಯ ಎಟಿಎಂ ಕಾರ್ಡ್ ಬ್ಲಾಕ್ ಮಾಡಿದ ಬಳಿಕ ಹೊಸ ಎಟಿಎಂ ಕಾರ್ಡ್ ವಿತರಣೆಗಾಗಿ.