ಬಾಲಿವುಡ್ ನಟ ಸೈಫ್ ಅಲಿ ಖಾನ್ ಅವರು ಇತ್ತೀಚೆಗೆ ಅನುಭವಿಸಿದ ಆರೋಗ್ಯ ಸಮಸ್ಯೆಯ ಸಂದರ್ಭದಲ್ಲಿ ಒಬ್ಬ ಆಟೋ ಚಾಲಕ ಮೆರೆದ ಮಾನವೀಯತೆ ಎದ್ದು ಕಾಣುವಂತಿದೆ. ಭಜನ್ ಸಿಂಗ್ ರಾಣಾ ಎಂಬ ಈ ಆಟೋ ಚಾಲಕ ರಕ್ತಸಿಕ್ತ ಸ್ಥಿತಿಯಲ್ಲಿದ್ದ ಸೈಫ್ ಅಲಿ ಖಾನ್ ರನ್ನು ಅವರ ಪುತ್ರ ಇಬ್ರಾಹಿಂ ಜೊತೆ ಲಿಲಾವತಿ ಆಸ್ಪತ್ರೆಗೆ ಸಾಗಿಸಿದ್ದರು.
ಈ ಘಟನೆ ಬಗ್ಗೆ ಮಾತನಾಡಿದ ರಾಣಾ, ಆ ರಾತ್ರಿ ತಮ್ಮ ಸಾಮಾನ್ಯ ದಿನಚರಿಯಂತೆ ಆಟೋ ಓಡಿಸುತ್ತಿದ್ದಾಗ ಒಬ್ಬ ಮಹಿಳೆ ತಮ್ಮನ್ನು ನಿಲ್ಲಿಸಿ ಸಹಾಯಕ್ಕೆ ಕರೆದಿದ್ದು, ನೋಡಿದಾಗ ರಕ್ತಸಿಕ್ತ ಸ್ಥಿತಿಯಲ್ಲಿದ್ದ ಒಬ್ಬ ವ್ಯಕ್ತಿಯನ್ನು ಕಂಡು ಆತಂಕವಾಯಿತು. ಆ ವ್ಯಕ್ತಿಯನ್ನು ಮತ್ತು ಅವರೊಂದಿಗೆ ಇದ್ದ ಇಬ್ಬರನ್ನು ಆಟೋದಲ್ಲಿ ಕೂರಿಸಿಕೊಂಡು ಆಸ್ಪತ್ರೆಗೆ ಕರೆದೊಯ್ದೆ ಎಂದರು.
ಆಸ್ಪತ್ರೆಗೆ ಹೋಗುವ ದಾರಿಯಲ್ಲಿ ಆ ವ್ಯಕ್ತಿ ಸೈಫ್ ಅಲಿ ಖಾನ್ ಎಂದು ಗೊತ್ತಾಗಿದ್ದು, ಗಾಯಗಳಿಂದ ಬಳಲುತ್ತಿದ್ದರೂ ಸಹ, ಸೈಫ್ ಅಲಿ ಖಾನ್ ಶೀಘ್ರವಾಗಿ ಚಿಕಿತ್ಸೆಗಾಗಿ ಆಸ್ಪತ್ರೆ ಸಿಬ್ಬಂದಿಗೆ ವಿನಂತಿಸಿಕೊಂಡರು. ರಾಣಾ ಅವರ ಪ್ರಕಾರ, ಸೈಫ್ ಅಲಿ ಖಾನ್, ಆಸ್ಪತ್ರೆಯ ಗೇಟ್ ಬಳಿ ನಿಂತಿದ್ದ ಗಾರ್ಡ್ ಗೆ “ದಯವಿಟ್ಟು ಸ್ಟ್ರೆಚರ್ ತನ್ನಿ, ನಾನು ಸೈಫ್ ಅಲಿ ಖಾನ್” ಎಂದು ಕೂಗಿದ್ದರಂತೆ.
ಈ ಘಟನೆಯ ಬಗ್ಗೆ ಮಾತನಾಡುತ್ತಾ ರಾಣಾ, ತಮ್ಮ ಜೀವನದಲ್ಲಿ ಇಂತಹ ಒಂದು ಅನುಭವವಾಗುವುದು ಎಂದು ನಿರೀಕ್ಷಿಸಿರಲಿಲ್ಲ. ಸೈಫ್ ಅಲಿ ಖಾನ್ ಅವರಿಗೆ ಸಹಾಯ ಮಾಡಿರುವುದು ಸಂತಸ ತಂದಿದೆ ಎಂದು ಹೇಳಿದರು.