ನವದೆಹಲಿ: ಜನವರಿ 22 ರಂದು ಭಗವಾನ್ ರಾಮನ ಜನ್ಮಸ್ಥಳವಾದ ಅಯೋಧ್ಯೆಯ ರಾಮ ದೇವಾಲಯದಲ್ಲಿ ರಾಮ್ ಲಲ್ಲಾ ‘ಪ್ರಾಣ-ಪ್ರತಿಷ್ಠಾ’ ಸಮಾರಂಭಕ್ಕೆ ಭರ್ಜರಿ ಸಿದ್ಧತೆ ನಡೆಸಲಾಗಿದ್ದು, ನಾಳೆ ಅಧಿಕೃತವಾಗಿ ಭಗವಾನ್ ಶ್ರೀರಾಮ ರಾಮಮಂದಿರದ ಗರ್ಭಗುಡಿಯಲ್ಲಿ ವಿರಾಜಮಾನರಾಗಲಿದ್ದಾರೆ.
ಜನವರಿ 22 ರಂದು ಮಧ್ಯಾಹ್ನ 12.20 ಕ್ಕೆ ಪೌಶ್ ಶುಕ್ಲಾ ದ್ವಾದಶಿ ಅಭಿಜಿತ್ ಮುಹೂರ್ತದಲ್ಲಿ ಪ್ರತಿಷ್ಠಾಪನಾ ಕಾರ್ಯಕ್ರಮ ಪೂರ್ಣಗೊಳ್ಳಲಿದೆ. ಶ್ರೀ ರಾಮ್ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ 3,000 ವಿವಿಐಪಿಗಳು ಸೇರಿದಂತೆ 7,000 ಜನರನ್ನು ಪ್ರತಿಷ್ಠಾಪನಾ ಸಮಾರಂಭಕ್ಕೆ ಆಹ್ವಾನಿಸಿದೆ.
ಉದ್ಯಮಿಗಳು
– ಮುಕೇಶ್ ಅಂಬಾನಿ
– ಗೌತಮ್ ಅದಾನಿ
– ರತನ್ ಟಾಟಾ
– ಕುಮಾರ್ ಮಂಗಲಂ ಬಿರ್ಲಾ
– ಎನ್.ಚಂದ್ರಶೇಖರನ್
– ಅನಿಲ್ ಅಗರ್ವಾಲ್
– ಎನ್.ಆರ್.ನಾರಾಯಣ ಮೂರ್ತಿ
ಕ್ರೀಡಾಪಟುಗಳು
– ಸಚಿನ್ ತೆಂಡೂಲ್ಕರ್
– ವಿರಾಟ್ ಕೊಹ್ಲಿ
– ಮಹೇಂದ್ರ ಸಿಂಗ್ ಧೋನಿ
– ದೀಪಿಕಾ ಕುಮಾರಿ
ಅಯೋಧ್ಯೆ ರಾಮ ಮಂದಿರ ಸಿನಿಮಾ ಗಣ್ಯರ ಅತಿಥಿಗಳ ಪಟ್ಟಿ
– ಅಮಿತಾಭ್ ಬಚ್ಚನ್
– ಅಕ್ಷಯ್ ಕುಮಾರ್
– ಅನುಪಮ್ ಖೇರ್
– ಮಾಧುರಿ ದೀಕ್ಷಿತ್
– ಸಂಜಯ್ ಲೀಲಾ ಬನ್ಸಾಲಿ
– ಮೋಹನ್ ಲಾಲ್
– ರಜನಿಕಾಂತ್
– ರಣದೀಪ್ ಹೂಡಾ
– ರಣಬೀರ್ ಕಪೂರ್
– ಅನುಷ್ಕಾ ಶರ್ಮಾ
– ಕಂಗನಾ ರಣಾವತ್
– ರಿಷಬ್ ಶೆಟ್ಟಿ
– ಮಧುರ್ ಭಂಡಾರ್ಕರ್
– ಅಜಯ್ ದೇವಗನ್
– ಜಾಕಿ ಶ್ರಾಫ್
– ಟೈಗರ್ ಶ್ರಾಫ್
– ಪ್ರಭಾಸ್
– ಆಯುಷ್ಮಾನ್ ಖುರಾನಾ
– ಆಲಿಯಾ ಭಟ್
– ಸನ್ನಿ ಡಿಯೋಲ್
ಸುಪ್ರೀಂ ಕೋರ್ಟ್ ನ ಐವರು ನ್ಯಾಯಮೂರ್ತಿಗಳಿಗೆ ಆಹ್ವಾನ
ದೇವಾಲಯದ ಟ್ರಸ್ಟ್ ಪರವಾಗಿ, ರಾಮ ಮಂದಿರದ ಬಗ್ಗೆ ಐತಿಹಾಸಿಕ ತೀರ್ಪು ನೀಡಿದ ಸುಪ್ರೀಂ ಕೋರ್ಟ್ನ 5 ನ್ಯಾಯಾಧೀಶರಿಗೆ ಆಹ್ವಾನವನ್ನು ಕಳುಹಿಸಲಾಗಿದೆ. ಇದರಲ್ಲಿ ಹಾಲಿ ಸಿಜೆಐ ಡಿ.ವೈ.ಚಂದ್ರಚೂಡ್ ಕೂಡ ಸೇರಿದ್ದಾರೆ.