
ಯುವ ಕಾಂಗ್ರೆಸ್ ಸ್ಥಾಪನಾ ದಿವಸದಂದು ಪಂಜಾಬ್ ಕಾಂಗ್ರೆಸ್ ನಾಯಕ ಪವನ್ ದೇವನ್ 1998ರ ಥ್ರೋಬ್ಯಾಕ್ ಚಿತ್ರವೊಂದನ್ನು ಶೇರ್ ಮಾಡಿದ್ದಾರೆ. ಚಿತ್ರದಲ್ಲಿ ಪಕ್ಷದ ತಮ್ಮ ಸಹವರ್ತಿಗಳೊಂದಿಗೆ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಜೊತೆಗೆ ಗ್ರೂಪ್ ಫೋಟೋಗೆ ಪೋಸ್ ಕೊಟ್ಟಿದ್ದಾರೆ ಪವನ್.
ಆದರೆ ಈ ಚಿತ್ರದಲ್ಲಿ ಎಲ್ಲರಿಗಿಂತ ಹೆಚ್ಚಾಗಿ ಎದ್ದು ಕಾಣುವುದು ಮನಿಶ್ ತಿವಾರಿ. ತಮ್ಮ ತಾರುಣ್ಯದ ದಿನಗಳಲ್ಲಿ ಭಾರೀ ದೇಹ ಹೊಂದಿದ್ದ ಮನಿಶ್ ಈಗ ಭಾರೀ ತೆಳ್ಳಗಾಗಿ ಫಿಟ್ ಆಗಿದ್ದಾರೆ. ಆ ಚಿತ್ರ ತೆಗೆದ ದಿನಗಳಲ್ಲಿ ತಮ್ಮ ದೇಹದ ತೂಕವು 100 ಕೆಜಿಗಿಂತ ಹೆಚ್ಚಿದ್ದಿದ್ದಾಗಿ ತಿವಾರಿ ತಿಳಿಸಿದ್ದಾರೆ.
ಚಿನ್ನದ ಪದಕ ಗೆಲ್ಲಲು ನೆರವಾದ ಸ್ವಯಂ ಸೇವಕಿ ನೆನೆದ ಅಥ್ಲೀಟ್
ಪಂಜಾಬ್‌ನ ಆನಂದ್ಪುರ ಸಾಹೀಬ್‌ನ ಸಂಸದರು ಅಕ್ಟೋಬರ್ 1999ರಲ್ಲಿ 102 ಕೆಜಿ ತೂಕವಿದ್ದರು. ಭಾರೀ ಕಸರತ್ತು ನಡೆಸಿದ ತಿವಾರಿ ಮಾರ್ಚ್ 2000ನೇ ಇಸವಿ ವೇಳೆಗೆ ದೇಹ ತೂಕವನ್ನು 71 ಕೆಜಿಗೆ ಇಳಿಸಿಕೊಂಡಿದ್ದರು. ತಮ್ಮ ಈ ಬದಲಾವಣೆಯ ಹಿಂದಿನ ದಿನಗಳ ಬಗ್ಗೆ ತಿವಾರಿ ಟ್ವೀಟ್ ಒಂದರ ಮೂಲಕ ಆಸಕ್ತಿಕರ ವಿಚಾರಗಳನ್ನು ಹಂಚಿಕೊಂಡಿದ್ದಾರೆ.
ಪ್ರತಿನಿತ್ಯ ಕನಿಷ್ಠ ಒಂದು ಗಂಟೆ ವ್ಯಾಯಾಮ, ಕಾರ್ಬೋಹೈಡ್ರೇಟ್‌ಗಳ ವರ್ಜನೆ, ಆಲ್ಕೋಹಾಲ್ ತ್ಯಜಿಸಿದ್ದು, ಪ್ರೋಟೀನ್ ಹಾಗೂ ನಾರಿನಂಶ ಇರುವ ಆಹಾರದ ಸೇವನೆ, ರಾತ್ರಿ ವೇಳೆ ಕಾರ್ಬೋಹೈಡ್ರೇಟ್ ಸೇವನೆಗೆ ಗುಡ್‌ಬೈ ಹೇಳಿದಲ್ಲಿ ಹೀಗೆ ತೂಕ ಇಳಿಸಬಹುದು ಎಂದು ತಿವಾರಿ ತಮ್ಮ ಫಿಟ್ನೆಸ್ ಸೀಕ್ರೆಟ್ ಹಂಚಿಕೊಂಡಿದ್ದಾರೆ.