
ಟ್ವಿಟರ್ ಬಳಕೆದಾರ ಸಂಜಯ್ ಕುಮಾರ್ ಎನ್ನುವವರು ಈ ವಿಡಿಯೋ ಶೇರ್ ಮಾಡಿದ್ದಾರೆ. ವಿಡಿಯೋದಲ್ಲಿ ಹಳದಿ ಬಣ್ಣದ ಹಾವೊಂದು ಹೋಗುತ್ತಿದ್ದು, ಅದರ ಬೆನ್ನ ಮೇಲೆ ಕಪ್ಪೆ ಕುಳಿತಿದೆ. ಕಪ್ಪೆ ಒಂದೇ ಕಡೆ ಕುಳಿತಿದ್ದರೂ ಹಾವು ಹರಿದಾಡುತ್ತಿರುವ ಕಾರಣ ಕಪ್ಪೆ ಜಾರುಬಂಡಿ ಆಡುತ್ತಿರುವಂತೆ ವಿಡಿಯೋದಲ್ಲಿ ಭಾಸವಾಗುತ್ತದೆ.
ಸಾವಿನ ಮೇಲೆ ಸಂಚಾರ ಎಂಬ ಶೀರ್ಷಿಕೆ ಇದಕ್ಕೆ ಸೂಕ್ತ ಎನಿಸುತ್ತದೆ. ಏಕೆಂದರೆ ಹಾವು ಏನಾದರೂ ಹಿಂದಿರುಗಿಬಿಟ್ಟರೆ ಕಪ್ಪೆಯ ಜೀವ ಅಲ್ಲಿಗೇ ಕಥಮ್. ಹಾವು ಅಲ್ಲಾಡಿದರೆ ಕಪ್ಪೆ ಸುಲಭದಲ್ಲಿ ಜಿಗಿದು ತಪ್ಪಿಸಿಕೊಳ್ಳಬಹುದಾದರೂ ಅಪಾಯ ಅಂತೂ ತಪ್ಪಿದ್ದಲ್ಲ.
10 ಸೆಕೆಂಡ್‌ಗಳ ಈ ಕಿರು ವಿಡಿಯೋ ಹಾಸ್ಯಭರಿತವಾಗಿಯೂ, ಸೂಕ್ಷ್ಮವಾಗಿ ಅವಲೋಕಿಸಿದಾಗ ಭಯಾನಕವೂ ಆಗಿದ್ದು, ಒಬ್ಬೊಬ್ಬರು ಒಂದೊಂದು ರೀತಿಯಲ್ಲಿ ಕಮೆಂಟ್ ಮಾಡುತ್ತಿದ್ದಾರೆ.