ಬೆಂಗಳೂರು: ಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲಮಂಗಲ ತಾಲೂಕಿನ ಅರಿಶಿನಕುಂಟೆಯಲ್ಲಿ ಯುವಕನೊಬ್ಬನ ಕತ್ತು ಸೀಳಿ ಭೀಕರವಾಗಿ ಹತ್ಯೆ ಮಾಡಲಾಗಿದೆ.
ಹೇಮರಾಜ್(28) ಕೊಲೆಯಾದ ಯುವಕ. ನೇಪಾಳ ಮೂಲದ ಹೇಮರಾಜುನನ್ನು ಬಿಹಾರ ಮೂಲದ ಲಕ್ಕಿ ಹಾಗೂ ಮುಕೇಶ್ ಎಂಬುವರು ಕೊಲೆ ಮಾಡಿದ್ದಾರೆ. ಬೈಕ್ ವಿಚಾರಕ್ಕೆ ಯುವಕರ ನಡುವೆ ಗಲಾಟೆಯಾಗಿದ್ದು, ರಾತ್ರಿ ಹೇಮರಾಜ್ ಮಲಗಿದ್ದ ಸಂದರ್ಭದಲ್ಲಿ ಕತ್ತು ಕೊಯ್ದು ಹತ್ಯೆ ಮಾಡಿದ ಆರೋಪಿಗಳು ಪರಾರಿಯಾಗಿದ್ದಾರೆ ಎನ್ನಲಾಗಿದೆ. ನೆಲಮಂಗಲ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.