
ಬೆಂಗಳೂರು: ಆಪ್ತಸ್ನೇಹಿತ ಮತ್ತು ಸೋದರಸಂಬಂಧಿ ರಾಜು ಪಾಟೀಲ ಅವರ ನಿಧನಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕಂಬನಿ ಮಿಡಿದಿದ್ದಾರೆ.
ಹುಬ್ಬಳ್ಳಿಯ ಶಕ್ತಿನಗರ ನಿವಾಸಿ ರಾಜು ಪಾಟೀಲ(64) ನಿಧನರಾಗಿದ್ದಾರೆ. ರಾಜು ಪಾಟೀಲ್ ಅವರು ಪತ್ನಿ, ಪುತ್ರಿಯನ್ನು ಅಗಲಿದ್ದಾರೆ
ಸಹೋದರ ಸಂಬಂಧಿ ಹಾಗೂ ಆಪ್ತಸ್ನೇಹಿತ ರಾಜು ಪಾಟೀಲ್ ಅವರು ನಿಧನದಿಂದ ನಾನು ತುಂಬಾ ದುಃಖಿತನಾಗಿದ್ದೇನೆ. ಅವರು ಆಪ್ತಮಿತ್ರರಾಗಿದ್ದರು. ನಾವಿಬ್ಬರೂ ಬಾಲ್ಯದಿಂದಲೇ ಕೂಡಿ ಬೆಳೆದವರು. ನಾನು ಹುಬ್ಬಳ್ಳಿಯಲ್ಲಿ ಇದ್ದಾಗ ಸದಾ ನನ್ನ ಜೊತೆಗೆ ಇರುತ್ತಿದ್ದರು. ಎಂದು ಸಿಎಂ ಕಂಬನಿ ಮಿಡಿದಿದ್ದು, ಅವರ ಕುಟುಂಬದವರಿಗೆ ದುಃಖ ಭರಿಸುವ ಶಕ್ತಿ ದೊರೆಯಲಿ ಎಂದು ಪ್ರಾರ್ಥಿಸಿದ್ದಾರೆ.
ಬಾಲ್ಯ ಸ್ನೇಹಿತನ ಅಂತ್ಯಕ್ರಿಯೆಯಲ್ಲಿ ಭಾಗವಹಿಸಲು ಸಿಎಂ ಬಸವರಾಜ ಬೊಮ್ಮಾಯಿ ಇಂದು ಹುಬ್ಬಳ್ಳಿಗೆ ಪ್ರಯಾಣ ಬೆಳೆಸಲಿದ್ದಾರೆ.