ಕೋಲಾರ: ಕೋಲಾರ ಗ್ರಾಮಾಂತರ ಠಾಣೆ ಪೊಲೀಸರು ಕ್ಷುಲ್ಲಕ ಕಾರಣಕ್ಕೆ ಸ್ನೇಹಿತನ ಕೊಲೆ ಮಾಡಿದ ಇಬ್ಬರನ್ನು ಬಂಧಿಸಿದ್ದಾರೆ.
ಶಂಕರನಾಗ್ ಕೊಲೆಯಾದ ವ್ಯಕ್ತಿ. ಸ್ನೇಹಿತರಾದ ಲಕ್ಷ್ಮಣ್ ಮತ್ತು ಗಣೇಶ್ ಅವರನ್ನು ಬಂಧಿಸಲಾಗಿದೆ. ಡಿಸೆಂಬರ್ 17ರಂದು ಕೋಲಾರ ತಾಲೂಕಿನ ಹರಟಿ ಗ್ರಾಮದಲ್ಲಿ ಕೊಲೆ ಮಾಡಲಾಗಿತ್ತು. ಕುಡಿದ ಅಮಲಿನಲ್ಲಿ ಸಿಗರೇಟ್ ಸೇದಲು ಇಬ್ಬರು ಬೆಂಕಿ ಪೊಟ್ಟಣ ಕೇಳಿದ್ದರು. ಬೆಂಕಿ ಪಟ್ಟಣ ನೀಡಿಲ್ಲ ಎಂದು ಶಂಕರ್ ನಾಗ್ ಮೇಲೆ ಹಲ್ಲೆ ಮಾಡಿದ್ದರು. ಬಿಯರ್ ಬಾಟಲಿಯಿಂದ ಶಂಕರ್ ನಾಗ್ ತಲೆಗೆ ಇಬ್ಬರು ಹೊಡೆದು ಗಾಯಗೊಳಿಸಿ ಬಳಿಕ ಕುತ್ತಿಗೆ ಬಿಗಿದು ಸ್ನೇಹಿತನನ್ನು ಕೊಲೆ ಮಾಡಿದ್ದರು. ಕೋಲಾರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಆರೋಪಿಗಳನ್ನು ಪೋಲೀಸರು ಬಂಧಿಸಿದ್ದಾರೆ.