ಪತಿ- ಪತ್ನಿ ಸಂಬಂಧ ಅತ್ಯಂತ ಸೂಕ್ಷ್ಮ ಸಂಬಂಧವಾಗಿದೆ. ಈ ಸಂಬಂಧದಲ್ಲಿ ಸಣ್ಣ ಸಮಸ್ಯೆ ಕಾಣಿಸಿಕೊಂಡ್ರೂ ಅದನ್ನು ತಕ್ಷಣ ಪರಿಹರಿಸಿಕೊಳ್ಳಬೇಕು. ದೀರ್ಘಕಾಲ ಸಂಬಂಧ ಸಂತೋಷದಿಂದ ಕೂಡಿರಬೇಕೆಂದ್ರೆ ಇಬ್ಬರ ಕಡೆಯಿಂದ ನಿರಂತರ ಪ್ರಯತ್ನ ಅಗತ್ಯ. ಅನೇಕ ಬಾರಿ ಎಷ್ಟೇ ಪ್ರಯತ್ನಿಸಿದ್ರೂ ಸಮಸ್ಯೆ ಉಲ್ಬಣಿಸುತ್ತದೆ. ಈ ಸಮಯದಲ್ಲಿ ವಾಸ್ತು ಶಾಸ್ತ್ರದ ಸಹಾಯ ಪಡೆಯಬಹುದು. ಹಿಂದೂ ಧರ್ಮದಲ್ಲಿ ವ್ಯಕ್ತಿಯ ಜೀವನಕ್ಕೆ ಅಗತ್ಯವಿರುವ ಎಲ್ಲ ವಿಷ್ಯಗಳನ್ನು ಹೇಳಲಾಗಿದೆ. ದಾಂಪತ್ಯದಲ್ಲಿ ಬರುವ ಸಮಸ್ಯೆಯನ್ನು ಹೇಗೆ ನಿವಾರಿಸಬೇಕು ಎಂಬ ಮಾಹಿತಿ ಕೂಡ ಇದೆ.
- ದಾಂಪತ್ಯ ಜೀವನದಲ್ಲಿ ಸುಖ ಸಿಗಬೇಕು ಎನ್ನುವವರು ವಾಸ್ತು ಶಾಸ್ತ್ರದ ಪ್ರಕಾರ, ಮಲಗುವ ಕೋಣೆಯಲ್ಲಿ ಯಾವಾಗಲೂ ಸುಗಂಧ ದ್ರವ್ಯವನ್ನು ಸಿಂಪಡಿಸಬೇಕು. ಕೋಣೆಯಲ್ಲಿ ಯಾವಾಗಲೂ ಸುಗಂಧದ ಸುಹಾಸನೆ ತುಂಬಿರಬೇಕು. ಇದು ಇಬ್ಬರ ಮನಸ್ಥಿತಿಯನ್ನು ಉತ್ತಮಗೊಳಿಸುತ್ತದೆ.
- ಪ್ರತಿ ಶುಕ್ರವಾರ ನಿಮ್ಮ ಬೆಡ್ ರೂಮಿನಲ್ಲಿ ಕೃತಕ ಹೂಗಳನ್ನು ಜೋಡಿಸಿ. ಈ ಹೂವುಗಳ ಮೇಲೆ ಸುಗಂಧ ದ್ರವ್ಯ ಸಿಂಪಡಿಸಿ. ಇದು ಕೋಣೆಯಲ್ಲಿ ಧನಾತ್ಮಕ ಶಕ್ತಿಯನ್ನು ಹೆಚ್ಚಿಸುತ್ತದೆ.
- ಧೂಪದ್ರವ್ಯ ಕೂಡ ದಾಂಪತ್ಯ ಸಮಸ್ಯೆಯನ್ನು ಬಗೆಹರಿಸಿ, ಇಬ್ಬರ ಮಧ್ಯೆ ಪ್ರೀತಿ ಹೆಚ್ಚಿಸುತ್ತದೆ. ನೀವು ಭಾನುವಾರ ಮಲಗುವ ಕೋಣೆಯಲ್ಲಿ ಧೂಪವನ್ನು ಹಚ್ಚಿ. ಇದು ನಕಾರಾತ್ಮಕ ಶಕ್ತಿಯನ್ನು ತೊಲಗಿಸಿ, ಮನೆಯ ವಾತಾವರಣವನ್ನು ಶಾಂತಗೊಳಿಸುತ್ತದೆ. ಇಬ್ಬರ ಮಧ್ಯೆ ಇರುವ ಭಿನ್ನಾಭಿಪ್ರಾಯ ನಿಧಾನವಾಗಿ ಕಡಿಮೆ ಆಗ್ತಾ ಬರುತ್ತದೆ.