
ತಾಪಮಾನವು ತುಂಬಾ ಕಡಿಮೆಯಾಗಿರುವುದರಿಂದ ದೇಶದ ಇತರ ಕೆಲವು ಭಾಗಗಳಲ್ಲಿ ಚಳಿ ಗಾಳಿ ಬೀಸುತ್ತಿದೆ. ಸ್ಕೈಮೆಟ್‌ವೆದರ್‌ನ ಮುನ್ಸೂಚನೆಗಳ ಪ್ರಕಾರ, ಉತ್ತರ ಭಾರತದ ಹಿಮಾವೃತ ಪರ್ವತಗಳಿಂದ ಬರುವ ವಾಯುವ್ಯ ಮಾರುತಗಳು ಪಂಜಾಬ್, ಹರಿಯಾಣ, ದೆಹಲಿ, ಉತ್ತರ ಪ್ರದೇಶ ಮತ್ತು ರಾಜಸ್ಥಾನದಲ್ಲಿ ತಾಪಮಾನವನ್ನು ಗಮನಾರ್ಹವಾಗಿ ಕಡಿಮೆ ಮಾಡುತ್ತದೆ. ಆದ್ದರಿಂದ ವಾತಾವರಣ ಸಂಪೂರ್ಣವಾಗಿ ಚಿಲ್ಡ್ ಆಗಿ ಇರುತ್ತದೆ.
ನರಕಂದ, ಚಮೋಲಿ, ಗುಲ್ಮಾರ್ಗ್ ಮತ್ತು ಕೇದಾರನಾಥಗಳಲ್ಲಿ ಈ ತಾಜಾ ಹಿಮಪಾತವನ್ನು ಚಳಿಗಾಲದ ಆರಂಭವೆಂದು ಗುರುತಿಸಬಹುದು. ಈ ಸ್ಥಳಗಳಲ್ಲಿ ಇತ್ತೀಚಿನ ಹಿಮಪಾತದ ಕೆಲವು ಫೋಟೋಗಳು ವೈರಲ್ ಆಗಿದ್ದು, ಪ್ರದೇಶವೆಲ್ಲಾ ಬಿಳಿ ಬಣ್ಣವನ್ನು ಹೊದ್ದುಕೊಂಡಂತೆ ತೋರುತ್ತಿದೆ.
ಸುಂದರವಾದ ಕೇದಾರನಾಥ ದೇವಾಲಯದ ಸುತ್ತಲೂ ಶ್ವೇತವರ್ಣ ಸುತ್ತಿಕೊಂಡಿರುವಂತೆ ತೋರುತ್ತಿದೆ. ಉತ್ತರಾಖಂಡದ ಕೇದಾರನಾಥದಲ್ಲಿ ಡಿಸೆಂಬರ್ 7, 2021 ರಂದು ತಾಜಾ ಹಿಮಪಾತವಾಯಿತು. ಈ ಪ್ರದೇಶದ ತಾಪಮಾನವು ಸುಮಾರು -2 ಡಿಗ್ರಿ ಸೆಲ್ಸಿಯಸ್ ನಷ್ಟಿದೆ.
ಡಿಸೆಂಬರ್ 6, 2021 ರಂದು ಋತುವಿನ ಮೊದಲ ಭಾರಿ ಹಿಮಪಾತದ ನಂತರ ಕಾಶ್ಮೀರದ ರಮಣೀಯವಾದ ಗುಲ್ಮಾರ್ಗ್ ಕಣಿವೆಯಲ್ಲಿ ಹಿಮವು ಹಚ್ಚ ಹಸಿರಿನ ಮರಗಳನ್ನು ಆವರಿಸಿದೆ. ಹಿಮದಿಂದ ತೆರವುಗೊಂಡ ಬೀದಿಯನ್ನು ಹೊರತುಪಡಿಸಿ, ಎಲ್ಲವೂ ಕ್ಷೀರ ಬಿಳಿಯಾಗಿ ಕಾಣಿಸುತ್ತಿದೆ.
ಕಣಿವೆ ರಾಜ್ಯದ ಗುಲ್ಮಾರ್ಗ್‌ನ ತಾಜಾ ಹಿಮಪಾತದಲ್ಲಿ ಜನರ ಗುಂಪೊಂದು ಸಂಭ್ರಮಪಟ್ಟಿದ್ದಾರೆ. ಜನರು ಹಿಮದಲ್ಲಿ ಆಟವಾಡಿದ್ದು, ಸ್ಲೆಡ್ಜ್ ಗಳನ್ನು ಎಳೆಯುವ ಮುಖಾಂತರ ಸವಾರಿಯನ್ನು ಆನಂದಿಸಿದ್ದಾರೆ.
ಶರತ್ಕಾಲ ಮತ್ತು ಬೇಸಿಗೆಯಲ್ಲಿ ಗುಲ್ಮಾರ್ಗ್ ಅನ್ನು ಅದ್ಭುತವಾಗಿ ಕಾಣುವಂತೆ ಮಾಡುವ ಪೈನ್ ಮತ್ತು ಫರ್ ಮರಗಳ ಹಚ್ಚ ಹಸಿರು, ಇದೀಗ ಗಿರಿಧಾಮದಲ್ಲಿ ತಾಜಾ ಹಿಮಪಾತದ ನಂತರ ಏಕವರ್ಣಕ್ಕೆ ತಿರುಗಿದೆ.
ಹಿಮಾಚಲ ಪ್ರದೇಶದ ಶಿಮ್ಲಾದ ನರಕಂದದಲ್ಲಿ ಕೂಡ ಡಿಸೆಂಬರ್ 6, 2021 ರಂದು ಈ ಸ್ಥಳವು ತಾಜಾ ಹಿಮಪಾತ ಪಡೆದಿದೆ. ಸುಂದರವಾದ ಪಟ್ಟಣವನ್ನು ದಟ್ಟವಾದ ಹಿಮದ ಹೊದಿಕೆ ಆವರಿಸಿದೆ. ಎತ್ತ ನೋಡಿದ್ರೂ ಬಿಳಿ ಬಣ್ಣವೇ ಕಾಣುತ್ತಿದೆ.
ಶಿಮ್ಲಾದ ಸುಂದರವಾದ ಓಕ್ ಮರಗಳು ಕೂಡ ಹಚ್ಚಹಸಿರು ಬಣ್ಣವನ್ನು ಕಳೆದುಕೊಂಡು ಹಿಮದ ಬಿಳಿಯ ಹೊದಿಕೆಯನ್ನು ಧರಿಸಿದೆ. ಈ ವರ್ಷದ ಮೊದಲ ಹಿಮಪಾತದ ನಂತರ ಪಟ್ಟಣವು ಬಿಳಿ ಬಣ್ಣದಲ್ಲಿ ಮಿನುಗಿದೆ. ಹರ್ಸಿಲ್ ಕಣಿವೆಯ ಮುಖ್ವಾ ಗ್ರಾಮ ಕೂಡ ಬಿಳಿ ಬಣ್ಣವನ್ನು ಹೊದ್ದುಕೊಂಡು ಮಲಗಿದಂತೆ ಕಂಡುಬಂದಿದೆ. ಇಲ್ಲಿನ ಮನೆಗಳ ಛಾವಣಿಗಳು ದಟ್ಟವಾದ ಹಿಮದ ಹೊದಿಕೆಯಿಂದ ಆವೃತವಾಗಿದೆ.





