alex Certify ಫ್ರಾನ್ಸ್ ಜನರ ಹುಚ್ಚು ಸಂಪ್ರದಾಯ, ಹೊಸ ವರ್ಷಕ್ಕೆ 874 ಕಾರುಗಳಿಗೆ ಬೆಂಕಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಫ್ರಾನ್ಸ್ ಜನರ ಹುಚ್ಚು ಸಂಪ್ರದಾಯ, ಹೊಸ ವರ್ಷಕ್ಕೆ 874 ಕಾರುಗಳಿಗೆ ಬೆಂಕಿ

ದಶಕಗಳ ಹಿಂದಿನ ಸಂಪ್ರದಾಯದ ಭಾಗವಾಗಿ ಹೊಸ ವರ್ಷದ ಮುನ್ನಾದಿನದಂದು ಫ್ರಾನ್ಸ್‌ನ ಜನರು 874 ಕಾರುಗಳನ್ನು ಸುಟ್ಟು ಹಾಕಿದ್ದಾರೆ ಎಂದು ವರದಿಯಾಗಿದೆ‌. ಸುಟ್ಟ ವಾಹನಗಳು ಮತ್ತು ಕಸದ ತೊಟ್ಟಿಗಳನ್ನು ಇಳಿಸಿರುವ ಅಧಿಕಾರಿಗಳು, ಆನಂತರ 441 ಕ್ಕೂ ಹೆಚ್ಚು ಜನರನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಿದ್ದಾರೆ.

ಈಶಾನ್ಯ ಫ್ರಾನ್ಸ್‌ನ ಸ್ಟ್ರಾಸ್‌ಬರ್ಗ್‌ನಲ್ಲಿ, ನಡೆದ ವಿವಾದಾತ್ಮಕ ಸಂಪ್ರದಾಯದ ಘಟನೆಯಲ್ಲಿ ನಾಲ್ಕು ಪೊಲೀಸ್ ಅಧಿಕಾರಿಗಳಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಕೋವಿಡ್ ಸಾಂಕ್ರಾಮಿಕ ರೋಗದಿಂದಾಗಿ ಈ ಹೊಸ ವರ್ಷದ ಮುನ್ನಾದಿನದಂದು ಸುಟ್ಟಿರುವ ಕಾರುಗಳ ಸಂಖ್ಯೆಯಲ್ಲಿ ಇಳಿಮುಖವಾಗಿದೆ ಎಂದು ಫ್ರೆಂಚ್ ಅಧಿಕಾರಿಗಳು ಹೇಳಿದ್ದಾರೆ. 2019 ರಲ್ಲಿ ಈ ಸಂಪ್ರದಾಯದ ಹೆಸರಿನಲ್ಲಿ 1,316 ಕಾರುಗಳನ್ನು ಸುಟ್ಟು ಹಾಕಲಾಗಿತ್ತು ಎಂದು ಆಂತರಿಕ ಸಚಿವಾಲಯ ತಿಳಿಸಿದೆ. ಲಾಕ್‌ಡೌನ್ ನಿರ್ಬಂಧಗಳ ಕಾರಣದಿಂದಾಗಿ 2020 ರ‌ ಅಂಕಿಅಂಶ ತಿಳಿದಿಲ್ಲ.

ಫ್ರಾನ್ಸ್ ದೇಶದ ಪೂರ್ವ ಭಾಗದಲ್ಲಿರುವ ಸ್ಟ್ರಾಸ್‌ಬರ್ಗ್‌ನ ಸುತ್ತಮುತ್ತಲಿನ ಪ್ರದೇಶದಲ್ಲಿ ಕಾರು ಸುಡುವ ಸಂಪ್ರದಾಯವು 90 ರ ದಶಕದಿಂದಲು ನಡೆದುಕೊಂಡು ಬಂದಿದೆ‌. ಕಡಿಮೆ ಆದಾಯದ ದುಃಖದಲ್ಲಿದ್ದ ಯುವಕರು ಈ ಸಂಪ್ರದಾಯವನ್ನು ಪ್ರಾರಂಭಿಸಿದರು ಎಂದು ಹೇಳಲಾಗುತ್ತದೆ. 2005 ರಲ್ಲಿ ಅತಿ ಹೆಚ್ಚು ಅಂದರೆ 9,000 ಕಾರುಗಳಿಗೆ ಬೆಂಕಿ ಹಚ್ಚಲಾಯಿತು ಎಂದು ಪೊಲೀಸರು ತಿಳಿಸಿದ್ದಾರೆ. ದಂಗೆಕೋರ ಯುವಕರಿಂದ ಹಿಡಿದು, ಕ್ರಿಮಿನಲ್ ಕೃತ್ಯಗಳನ್ನು ಮುಚ್ಚಿಡಲು ಮತ್ತು ಸುಳ್ಳು ವಿಮೆ ಕ್ಲೈಮ್‌ ಮಾಡಲು ಫ್ರಾನ್ಸ್ ಜನರು ಈ ಸಂಪ್ರದಾಯದ ಹೆಸರಿನಲ್ಲಿ ಕಾರುಗಳನ್ನ ಸುಡುತ್ತಿದ್ದಾರೆ ಎಂಬ ಮಾಹಿತಿ ಇದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...