ಫ್ರಾನ್ಸ್‌ನ ಲ್ಯಾನ್ ನಗರದಲ್ಲಿ ಹಮ್ಮಿಕೊಂಡಿರುವ ರೆಸ್ಟೋರೆಂಟ್ ಹಾಗೂ ಹೊಟೇಲ್ ಉತ್ಸವದಲ್ಲಿ ಭಾಗಿಯಾಗಿದ್ದ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರಾನ್ ಮೇಲೆ ಮೊಟ್ಟೆಗಳಿಂದ ದಾಳಿ ಮಾಡಲಾಗಿದೆ.
ಮ್ಯಾಕ್ರನ್ ತೋಳಿಗೆ ಬಡಿದ ಮೊಟ್ಟೆ ಒಡೆಯದೇ ಹಾಗೇ ಬಿದ್ದಿದೆ. ಮೊಟ್ಟೆ ಎಸೆದ ವ್ಯಕ್ತಿಯನ್ನು ಭದ್ರತಾ ಸಿಬ್ಬಂದಿ ತಕ್ಷಣವೇ ವಶಕ್ಕೆ ಪಡೆದಿದ್ದಾರೆ.
“ಆತ ನನಗೆ ಏನಾದರೂ ಹೇಳೋದಿದ್ದರೆ ಬರಲಿ ಬಿಡಿ,” ಎಂದ ಮ್ಯಾಕ್ರನ್, “ಅವನನ್ನು ನೋಡಲು ಆಮೇಲೆ ಹೋಗುವೆ,” ಎಂದು ತಿಳಿಸಿದ್ದಾರೆ.
ಹುಡುಗಿಯರ ಈ ʼಸ್ವಭಾವʼ ಇಷ್ಟವಾಗಲ್ಲ ಹುಡುಗರಿಗೆ…..!
ಅಂತಾರಾಷ್ಟ್ರೀಯ ಕೆಟರಿಂಗ್, ಹೊಟೇಲ್ ಮತ್ತು ಆಹಾರ ಮೇಳೆದಲ್ಲಿ ಮ್ಯಾಕ್ರನ್ ಭಾಗಿಯಾಗಿದ್ದ ವೇಳೆ ಹೀಗೆ ಆಗಿದೆ.
2017ರಲ್ಲಿ ಅಧ್ಯಕ್ಷೀಯ ಚುನಾವಣೆಯ ಸಂದರ್ಭದಲ್ಲಿ ಪ್ಯಾರಿಸ್‌ನ ರಾಷ್ಟ್ರೀಯ ಕೃಷಿ ಮೇಳದಲ್ಲಿ ಭಾಗಿಯಾಗಿದ್ದ ಮ್ಯಾಕ್ರನ್ ಆಗಲೂ ಮೊಟ್ಟೆ ಏಟು ತಿಂದಿದ್ದರು.
ಇದೀಗ ಮರು ಚುನಾವಣೆ ಕೋರುತ್ತಿರುವ ಮ್ಯಾಕ್ರನ್ ಮುಂದಿನ ದಿನಗಳಲ್ಲಿ ಬಹಳಷ್ಟು ಸುತ್ತಾಟದಲ್ಲಿ ಭಾಗಿಯಾಗಲಿರುವ ಕಾರಣ ಅವರಿಗೆ ಭದ್ರತೆಯನ್ನು ಇನ್ನಷ್ಟು ಬಿಗಿ ಮಾಡಲಾಗಿದೆ.