ಬೀದರ್: ಮಾಜಿ ಸಚಿವ ದಿ. ಗುರುಪಾದಪ್ಪ ನಾಗಮಾರಪಲ್ಲಿ ಫೌಂಡೇಶನ್, ಗುರುಪಾದಪ್ಪ ನಾಗಮಾರಮಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ, ವಂದೇಮಾತರಂ ಶಿಕ್ಷಣ ಸಂಸ್ಥೆ, ಆರೆಸ್ಸೆಸ್ ಕೇಶವ ಕಾರ್ಯ ಸಂವರ್ಧನಾ ಸಮಿತಿ ಸಹಯೋಗದಲ್ಲಿ ಒಂದು ರೂಪಾಯಿಗೆ ಕೊರೋನಾ ಚಿಕಿತ್ಸೆ ವ್ಯವಸ್ಥೆ ಕಲ್ಪಿಸಲಾಗಿದೆ.
ಆಸ್ಪತ್ರೆಯ ಹುಂಡಿಗೆ ಒಂದು ರೂಪಾಯಿ ಹಾಕಿ ಚಿಕಿತ್ಸೆ ಪಡೆಯಬಹುದು. ಒಂದು ರೂಪಾಯಿ ಕೊಡದಿದ್ದರೂ ಕೊರೊನಾ ಸೋಂಕಿತರಿಗೆ ಉಚಿತ ಚಿಕಿತ್ಸೆ ಲಭ್ಯವಿದೆ.
ಗುರುಪಾದಪ್ಪ ನಾಗಮಾರಪಲ್ಲಿ ಫೌಂಡೇಶನ್ ಅಧ್ಯಕ್ಷ ಸೂರ್ಯಕಾಂತ ನಾಗಮಾರಪಲ್ಲಿ ಅವರು ಸೋಂಕಿತರಿಗೆ ಚಿಕಿತ್ಸೆ ವ್ಯವಸ್ಥೆ ಕಲ್ಪಿಸಿದ್ದಾರೆ. ಎಕ್ಸ್ ರೇ, ಸಿಟಿ ಸ್ಕ್ಯಾನ್, ರೆಮ್ ಡೆಸಿವಿರ್ ಇಂಜೆಕ್ಷನ್, ಅಗತ್ಯವಾದ ಮಾತ್ರೆಗಳು, ಊಟ, ತಿಂಡಿ ಎಲ್ಲವನ್ನೂ ಉಚಿತವಾಗಿ ನೀಡಲಾಗುತ್ತದೆ.
ಸಂಪೂರ್ಣವಾಗಿ ಉಚಿತ ಚಿಕಿತ್ಸೆಗೆ ವ್ಯವಸ್ಥೆ ಇದ್ದು, ನಾಲ್ವರು ತಜ್ಞ ವೈದ್ಯರು ಮತ್ತು ವಿಶೇಷ ತಜ್ಞರು ಹಾಗೂ 12 ನರ್ಸ್ ಗಳನ್ನು ನಿಯೋಜಿಸಲಾಗಿದೆ. ಗುರುಪಾದಪ್ಪ ನಾಗಮಾರಪಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ರಕ್ತ ತಪಾಸಣೆ, ಸಿಟಿ ಸ್ಕ್ಯಾನ್ ಮಾಡಿ ಸೋಂಕು ದೃಢಪಟ್ಟಲ್ಲಿ ಆರೈಕೆ ಕೇಂದ್ರಕ್ಕೆ ದಾಖಲಿಸಲಾಗುತ್ತದೆ. ರೋಗಿಗಳಿಗೆ ಅಗತ್ಯವಾದ ಚಿಕಿತ್ಸೆ ನೀಡಲಾಗುವುದು.