ಹುಬ್ಬಳ್ಳಿ : ರಾಜ್ಯ ಸರ್ಕಾರದ ಉಚಿತ ಶಕ್ತಿ ಯೋಜನೆಯಿಂದ ಸಾರಿಗೆ ಸಂಸ್ಥೆಯ ಸಿಬ್ಬಂದಿಗಳಿಗೆ ಮುಂದೆ ಸಂಬಳ ಕೊಡಲೂ ಕಷ್ಟವಾಗುತ್ತದೆ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ವಾಗ್ದಾಳಿ ನಡೆಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯ ಕಾಂಗ್ರೆಸ್ ಸರ್ಕಾರವು ಮೊದಲ ಸಂಪುಟದಲ್ಲಿ 5 ಗ್ಯಾರಂಟಿಗಳನ್ನೂ ಜಾರಿ ಮಾಡುತ್ತೇವೆ ಎಂದಿದ್ದರು. ಮಹಿಳೆಯರ ಉಚಿತ ಪ್ರಯಾಣಕ್ಕೂ ಸರಿಯಾದ ವ್ಯವಸ್ಥೆ ಮಾಡಿಲ್ಲ. ಸಾರಿಗೆ ಸಂಸ್ಥೆ ನಷ್ಟದಲ್ಲಿದೆ. ಮುಂದೆ ಸಂಬಳ ಕೊಡಲು ಕಷ್ಟವಾಗಲಿದೆ ಎಂದರು.
ಮಣಿಪುರದ ಘಟನೆ ವಿಚಾರದಲ್ಲಿ ಜಾತಿ, ಧರ್ಮದ ಸಂಘರ್ಷ ನಡೆಯುತ್ತಿದೆ. ಹಿಂದಿ ನರ್ಕಾರಗಳು ಮಾಡಿದ ತಪ್ಪಿನಿಂದಾಗಿ ನುಸುಳುಕೋರರು ಉತ್ತರ ಭಾರತದಲ್ಲಿದ್ದಾರೆ. ಅಲ್ಲಿ ವಿಧ್ವಂಸಕ ಕೆಲಸ ಮಾಡಲು ಕೆಲವರು ಬಂದು ಹೋಗುತ್ತಿದ್ದಾರೆ. ಈ ಬಗ್ಗೆ ಸಂಸತ್ ಅಧಿವೇಶನದಲ್ಲಿ ಚರ್ಚೆ ಮಾಡಲು ನಾವು ಸಿದ್ದ ಎಂದು ಹೇಳಿದರು.