ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುವ ಫೋಟೋವೊಂದು ಎಲ್ಲರ ಗಮನ ಸೆಳೆದಿದೆ. ವಿಕಲಚೇತನ ಪ್ರಯಾಣಿಕರಿಗೆ ಉಚಿತ ಪ್ರಯಾಣ ಎಂದು ಆಟೋ ಚಾಲಕರೊಬ್ಬರು ಆಟೋ ಹಿಂದೆ ಬರೆದಿದ್ದು, ಚಾಲಕನ ಸಾಮಾಜಿಕ ಕಾರ್ಯಕ್ಕೆ ಎಲ್ಲರೂ ಫಿದಾ ಆಗಿದ್ದಾರೆ. ಇದು ವಿಶೇಷ ಚೇತನ ಪ್ರಯಾಣಿಕರಿಗೆ ಉಚಿತ ಸವಾರಿಯನ್ನು ನೀಡುವ ಭರವಸೆ ನೀಡುತ್ತದೆ.
ತ್ರಿಚಕ್ರ ವಾಹನವು ದಿವ್ಯಾಂಗರಿಗೆ 1.5 ಕಿ.ಮೀ.ವರೆಗೆ ಉಚಿತ ಪ್ರಯಾಣವನ್ನು ಘೋಷಿಸುವುದನ್ನು ಇದು ತೋರಿಸಿದೆ. ವಾಹನದ ಹಿಂಭಾಗದಲ್ಲಿ “ಅಪಾಂಗ್ ಕೆ ಲಿಯೆ 1 ಮತ್ತು 1/2 ಕಿಲೋ ಮೀಟರ್ ಉಚಿತ” ಎಂದು ಬರೆಯಲಾಗಿದೆ.
ಮುಂಬೈನ ಮಲಾಡ್ ರಸ್ತೆಗಳಲ್ಲಿ ಆಟೋ ಕಾಣಿಸಿಕೊಂಡಿದೆ. ಪ್ರಯಾಣಿಕರೊಬ್ಬರು ಕ್ಯಾಮೆರಾದಲ್ಲಿ ಕ್ಲಿಕ್ಕಿಸಿ ಆನ್ಲೈನ್ ನಲ್ಲಿ ಹಂಚಿಕೊಂಡಿದ್ದಾರೆ. ಈ ಕಾಲದಲ್ಲೂ ಇಂತಹವರು ಕೋಟಿಗೊಬ್ಬರು ಎಂದು ಹಲವರು ಕಮೆಂಟ್ ಮಾಡಿದ್ದಾರೆ.