ಲಖನೌ: ಕೆಲಸದ ಸ್ಥಳದಲ್ಲಿ ಮಹಿಳೆಯರಿಗೆ ಸುರಕ್ಷಿತ ವಾತಾವರಣವನ್ನು ಒದಗಿಸುವುದಕ್ಕಾಗಿ ಯೋಗಿ ಆದಿತ್ಯನಾಥ್ ನೇತೃತ್ವದ ಉತ್ತರ ಪ್ರದೇಶ ಸರ್ಕಾರ, ರಾಜ್ಯಾದ್ಯಂತ ಕಾರ್ಖಾನೆಗಳಲ್ಲಿ ಯಾವುದೇ ಮಹಿಳಾ ಕಾರ್ಮಿಕರು ರಾತ್ರಿ ಪಾಳಿ ಮಾಡಬೇಕಾದ್ದಿಲ್ಲ ಎಂದು ಶನಿವಾರ ಆದೇಶ ಹೊರಡಿಸಿದೆ.
“ಬೆಳಗ್ಗೆ 6 ಗಂಟೆಯ ಮೊದಲು ಮತ್ತು ಸಂಜೆ 7 ರ ನಂತರ ಯಾವುದೇ ಮಹಿಳಾ ಕಾರ್ಮಿಕರು ಸ್ವತಃ ಲಿಖಿತ ಒಪ್ಪಿಗೆ ನೀಡದ ಹೊರತು ಕೆಲಸ ಮಾಡಬೇಕಾದ್ದಿಲ್ಲ. ಇಂತಹ ಸನ್ನಿವೇಶದಲ್ಲಿ ಈ ರೀತಿ ಒಪ್ಪಿಕೊಂಡ ಮಹಿಳಾ ಕಾರ್ಮಿಕರಿಗೆ ಉಚಿತ ಸಾರಿಗೆ, ಆಹಾರ ಮತ್ತು ಮೇಲೆ ತಿಳಿಸಲಾದ ಸಮಯದಲ್ಲಿ ಕೆಲಸ ಮಾಡುತ್ತಿದ್ದರೆ ಅವರ ಮೇಲಧಿಕಾರಿಗಳು ಅಗತ್ಯ ನಿಗಾವಹಿಸಬೇಕು” ಎಂದು ಸರ್ಕಾರದ ಸುತ್ತೋಲೆ ಹೇಳಿದೆ.
BIG BREAKING: ನಾಲ್ವರು ಭಾರತೀಯರು ಸೇರಿ 22 ಪ್ರಯಾಣಿಕರಿದ್ದ ವಿಮಾನ ಕಣ್ಮರೆ
ಅದೇ ರೀತಿ, ಮಹಿಳಾ ಕಾರ್ಮಿಕರು ಬೆಳಗ್ಗೆ 6 ಗಂಟೆಯ ಮೊದಲು ಮತ್ತು ಸಂಜೆ 7 ಗಂಟೆಯ ನಂತರ ಕೆಲಸ ಮಾಡಲು ನಿರಾಕರಿಸಿದರೆ, ಅವರನ್ನು ಉದ್ಯೋಗದಿಂದ ವಜಾಗೊಳಿಸಲಾಗುವುದಿಲ್ಲ. ರಾಜ್ಯದ ಎಲ್ಲಾ ಮಿಲ್‌ಗಳು ಮತ್ತು ಕಾರ್ಖಾನೆಗಳಲ್ಲಿ ಕೆಲಸ ಮಾಡುವ ಮಹಿಳಾ ಉದ್ಯೋಗಿಗಳಿಗೆ ಈ ವಿನಾಯಿತಿ ಅನ್ವಯ ಎಂದು ಸರ್ಕಾರ ಹೇಳಿದೆ.
ಕೆಲಸದ ಸ್ಥಳದಲ್ಲಿ ಲೈಂಗಿಕ ಕಿರುಕುಳದ ಘಟನೆಯನ್ನು ತಡೆಗಟ್ಟಲು ಮಹಿಳಾ ಕಾರ್ಮಿಕರಿಗೆ ಸುರಕ್ಷಿತ ಕೆಲಸದ ವಾತಾವರಣವನ್ನು ಒದಗಿಸುವ ಜವಾಬ್ದಾರಿಯು ಉದ್ಯೋಗದಾತರ ಮೇಲಿರುತ್ತದೆ. ಮೇಲಾಗಿ, ಮಾಲೀಕರು ಕಾರ್ಖಾನೆಯಲ್ಲಿ ದೂರು ಕಾರ್ಯವಿಧಾನವನ್ನು ಅಳವಡಿಸಿಕೊಳ್ಳುವುದು ಕಡ್ಡಾಯ. ಕೆಲಸದ ಸ್ಥಳದಲ್ಲಿ ಮಹಿಳೆಯರಿಗೆ ಲೈಂಗಿಕ ಕಿರುಕುಳ (ತಡೆಗಟ್ಟುವಿಕೆ, ನಿಷೇಧ ಮತ್ತು ಪರಿಹಾರ) ಕಾಯಿದೆ, 2013 ಅಥವಾ ಯಾವುದೇ ಇತರ ಸಂಬಂಧಿತ ಕಾಯ್ದೆಗಳ ನಿಬಂಧನೆಗಳೊಂದಿಗೆ ಅನ್ವಯವಾಗುತ್ತದೆ ಎಂಬುದನ್ನು ಸರ್ಕಾರ ಸ್ಪಷ್ಟಪಡಿಸಿದೆ.