ಬೆಂಗಳೂರು: ಜನವರಿ 1 ರ ಶುಕ್ರವಾರದಿಂದ ರಾಜ್ಯದಲ್ಲಿ ಎಸ್ಎಸ್ಎಲ್ಸಿ, ದ್ವಿತೀಯ ಪಿಯುಸಿ ತರಗತಿ ಮತ್ತು 6 ರಿಂದ 9 ನೇ ತರಗತಿಗೆ ಶಾಲೆ ಆವರಣದಲ್ಲಿ ವಿದ್ಯಾಗಮ ಕಲಿಕೆ ಆರಂಭವಾಗಿದೆ.
ವಿದ್ಯಾರ್ಥಿಗಳಿಗೆ ಹಳೆಯ ಪಾಸ್ ನಲ್ಲೇ ಉಚಿತವಾಗಿ ಪ್ರಯಾಣಿಸಲು ಕೆಎಸ್ಆರ್ಟಿಸಿ ಅವಕಾಶ ಕಲ್ಪಿಸಿದೆ. ಜನವರಿ 1 ರಿಂದ ರಾಜ್ಯದಲ್ಲಿ ಎಸ್ಎಸ್ಎಲ್ಸಿ ಮತ್ತು ದ್ವಿತೀಯ ಪಿಯುಸಿ ತರಗತಿ ಆರಂಭವಾಗಿ ವಿದ್ಯಾರ್ಥಿಗಳು ಶಾಲಾ, ಕಾಲೇಜಿಗೆ ಹೋಗಿ ಬರಲು ಅನುಕೂಲವಾಗುವಂತೆ ಜನವರಿ 31 ರವರೆಗೆ ಹಿಂದಿನ ವರ್ಷದ ಪಾಸ್ ನಲ್ಲಿಯೇ ಉಚಿತವಾಗಿ ಪ್ರಯಾಣಿಸಲು ಕೆಎಸ್ಆರ್ಟಿಸಿ ಅವಕಾಶ ಕಲ್ಪಿಸಿದೆ.
ಶಾಲಾ, ಕಾಲೇಜಿಗೆ ಹೋಗಿ ಬರುವ ವಿದ್ಯಾರ್ಥಿಗಳು 2019 -20 ನೇ ಸಾಲಿನ ಪಾಸ್ ಮತ್ತು ಪ್ರಸಕ್ತ ಶೈಕ್ಷಣಿಕ ಸಾಲಿನ ಶುಲ್ಕ ಪಾವತಿ ರಸೀದಿ ನಿರ್ವಾಹಕರಿಗೆ ತೋರಿಸಿ ಸಾಮಾನ್ಯ ಮತ್ತು ವೇಗದೂತ ಕೆಎಸ್ಆರ್ಟಿಸಿ ಬಸ್ ಗಳಲ್ಲಿ ಉಚಿತವಾಗಿ ಪ್ರಯಾಣಿಸಬಹುದಾಗಿದೆ ಎಂದು ಹೇಳಲಾಗಿದೆ.