alex Certify BIG NEWS: ಎಷ್ಟು ದಿನ ಉಚಿತ ಯೋಜನೆ ಮುಂದುವರೆಸುತ್ತೀರಿ, ಪಡಿತರ ಬದಲು ನೌಕರಿ ನೀಡಿ: ಸುಪ್ರೀಂ ಕೋರ್ಟ್ ಸಲಹೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಎಷ್ಟು ದಿನ ಉಚಿತ ಯೋಜನೆ ಮುಂದುವರೆಸುತ್ತೀರಿ, ಪಡಿತರ ಬದಲು ನೌಕರಿ ನೀಡಿ: ಸುಪ್ರೀಂ ಕೋರ್ಟ್ ಸಲಹೆ

ನವದೆಹಲಿ: ಜನರನ್ನು ಸ್ವಾವಲಂಬಿಗಳಾಗಿ ರೂಪಿಸಲು ಉದ್ಯೋಗ ಸೃಷ್ಟಿಸುವ ಬದಲು ಎಷ್ಟು ದಿನ ಉಚಿತ ಯೋಜನೆ ವ್ಯವಸ್ಥೆ ಮುಂದುವರಿಸುತ್ತೀರಿ ಎಂದು ಕೇಂದ್ರ ಸರ್ಕಾರಕ್ಕೆ ಸುಪ್ರೀಂಕೋರ್ಟ್ ಪ್ರಶ್ನಿಸಿದೆ.

ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯಡಿ ನೀಡುತ್ತಿರುವ ಉಚಿತ ಪಡಿತರ ವ್ಯವಸ್ಥೆಯಿಂದ ವಲಸಿಗ ಕಾರ್ಮಿಕರನ್ನು ಕೈಬಿಟ್ಟ ಕ್ರಮ ಪ್ರಶ್ನಿಸಿ ಎನ್‌ಜಿಒ ಸಲ್ಲಿಸಿದ ಅರ್ಜಿ ವಿಚಾರಣೆ ನಡೆಸಿದ್ದ ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳಾದ ಸೂರ್ಯಕಾಂತ್ ಮತ್ತು ಮನಮೋಹನ್ ಅವರಿದ್ದ ನ್ಯಾಯಪೀಠ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಸಂಯೋಜನೆಯಿಂದ ವಲಸಿಗ ಕಾರ್ಮಿಕರಿಗೆ ಪಡಿತರ ವಿತರಿಸಬೇಕು. ಆದರೆ, ರಾಜ್ಯ ಸರ್ಕಾರಗಳು ಹೊಣೆಗಾರಿಕೆಯಿಂದ ನುಣುಚಿಕೊಳ್ಳುತ್ತಿವೆ. ವಲಸಿಗರ ತುಷ್ಠೀಕರಣಕ್ಕೆ ಪಡಿತರ ಚೀಟಿ ನೀಡುತ್ತಿರುವ ರಾಜ್ಯಗಳು ಕೈತೊಳೆದುಕೊಳ್ಳುತ್ತಿವೆ. ಇದರಿಂದ ಕೇಂದ್ರ ಸರ್ಕಾರ ಹೆಚ್ಚಿನ ಜವಾಬ್ದಾರಿ ಹೊರಬೇಕಾಗಿದೆ ಎಂದು ಹೇಳಿದೆ.

ಸರ್ಕಾರದ ಪರವಾದ ಮಂಡಿಸಿದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, 2013ರ ಆಹಾರ ಭದ್ರತಾ ಕಾಯ್ದೆಯಡಿ ಕೇಂದ್ರ ಸರ್ಕಾರ ದೇಶದ 81 ಕೋಟಿ ಜನರಿಗೆ ಉಚಿತ ಪಡಿತರ ನೀಡುತ್ತಿದೆ. ಕೋವಿಡ್ ಕಾಲದಿಂದ ಆರಂಭವಾಗಿ ಇದುವರೆಗೂ ಉಚಿತವಾಗಿ ಪಡಿತರ ನೀಡಲಾಗುತ್ತಿದೆ ಎಂದು ಮಾಹಿತಿ ನೀಡಿದ್ದಾರೆ.

ಇದಕ್ಕೆ ಅಚ್ಚರಿ ವ್ಯಕ್ತಪಡಿಸಿದ ನ್ಯಾಯಪೀಠ, ಇಷ್ಟೊಂದು ಜನರಿಗೆ ಉಚಿತ ನೀಡುತ್ತಿರುವಾಗ ತೆರಿಗೆ ಪಾವತಿದಾರರು ಮಾತ್ರ ಹೊರಗುಳಿದ್ದಾರೆ ಎಂದರ್ಥವೇ ಎಂದು ಪ್ರಶ್ನಿಸಿದೆ.

ಎನ್‌ಜಿಒ ಪರ ಹಿರಿಯ ವಕೀಲ ಪ್ರಶಾಂತ್ ಭೂಷಣ್, ಕೊರೋನಾ ಕಾಲದಲ್ಲಿ ವಲಸಿಗರಿಗೆ ಉಚಿತ ಪಡಿತರ ನೀಡಲು ಕೋರ್ಟ್ ನಿರ್ದೇಶನ ನೀಡಿತ್ತು. ಇತ್ತೀಚೆಗೆ ಕೆಲವು ರಾಜ್ಯಗಳಲ್ಲಿ ಬದಲಾದ ನಿಯಮಗಳಿಂದ ಪಡಿತರ ವಿತರಣೆಯಲ್ಲಿ ವ್ಯತ್ಯಾಸವಾಗಿದೆ ಎಂದು ಹೇಳಿದ್ದಾರೆ. ಸುಪ್ರೀಂ ಕೋರ್ಟ್ ಜನವರಿ 8ಕ್ಕೆ ಪ್ರಕರಣದ ವಿಚಾರಣೆಯನ್ನು ಮುಂದೂಡಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...