
ಪಾಟಿಯಾಲಾ: ಎಎಪಿ ಸಂಚಾಲಕ, ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಪತ್ನಿ ಸುನೀತಾ ಕೇಜ್ರಿವಾಲ್ ಅವರು ಶನಿವಾರ ಹರ್ಯಾಣದಲ್ಲಿ ಪಕ್ಷದ ಚುನಾವಣಾ ಪ್ರಚಾರವನ್ನು ಪ್ರಾರಂಭಿಸಿದ್ದಾರೆ.
ಚುನಾವಣೆಗೆ ಒಳಪಡಲಿರುವ ಹರಿಯಾಣ ರಾಜ್ಯಕ್ಕೆ ದೆಹಲಿ ಮುಖ್ಯಮಂತ್ರಿ ಹೊಸ ಭರವಸೆ ಘೋಷಿಸಿದ್ದಾರೆ. ಪತಿ ಅರವಿಂದ್ ಕೇಜ್ರಿವಾಲ್ ಜೈಲಿನಲ್ಲಿರುವಾಗ ಅವರ ಪತ್ನಿ ಹರಿಯಾಣದಲ್ಲಿ ಪಕ್ಷದ ಗೆಲುವಿನ ಜವಾಬ್ದಾರಿಯನ್ನು ವಹಿಸಿಕೊಂಡಿದ್ದಾರೆ.
ಹರಿಯಾಣದ ಪಂಚಕುಲದಲ್ಲಿ ಶನಿವಾರ ನಡೆದ ಟೌನ್‌ಹಾಲ್ ಸಭೆಯಲ್ಲಿ ದೆಹಲಿ ಸಿಎಂ ಪತ್ನಿ ಸುನೀತಾ ಕೇಜ್ರಿವಾಲ್ ಅವರು ಇದು ಕೇಜ್ರಿವಾಲ್ ಕಿ ಗ್ಯಾರಂಟಿ ಎಂದು ಘೋಷಿಸಿದರು. ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್, ಎಎಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ(ಸಂಘಟನೆ) ಸಂದೀಪ್ ಪಾಠಕ್ ಮತ್ತು ರಾಜ್ಯಸಭಾ ಸಂಸದ ಸಂಜಯ್ ಸಿಂಗ್ ಇದ್ದರು.
ಎಎಪಿ ಉಚಿತ ಮತ್ತು 24 ಗಂಟೆಗಳ ವಿದ್ಯುತ್, ಉಚಿತ ಚಿಕಿತ್ಸೆ, ಉಚಿತ ಶಿಕ್ಷಣ, ಎಲ್ಲಾ ತಾಯಂದಿರು ಮತ್ತು ಸಹೋದರಿಯರಿಗೆ ತಿಂಗಳಿಗೆ 1,000 ರೂ., ಪ್ರತಿ ಯುವಕನಿಗೆ ಉದ್ಯೋಗ ನೀಡುವುದಾಗಿ ಭರವಸೆ ನೀಡಿದೆ.