ಶಿವಮೊಗ್ಗ: ಪಾನ್ ಕಾರ್ಡ್ ಅಪ್ಡೇಟ್ ಗೆ ಬಂದ ವಾಟ್ಸಾಪ್ ಸಂದೇಶವನ್ನು ನಂಬಿದ ಗ್ರಾಹಕರೊಬ್ಬರು ಖಾತೆಯಲ್ಲಿದ್ದ 7.25 ಲಕ್ಷ ರೂ. ಕಳೆದುಕೊಂಡಿದ್ದಾರೆ.
ಬ್ಯಾಂಕ್ ನಿಂದ ಪಾನ್ ಅಪ್ ಡೇಟ್ ಗೆ ವಾಟ್ಸಾಪ್ ಸಂದೇಶ ಕಳುಹಿಸಿರಬಹುದು ಎಂದು ಭಾವಿಸಿದ ಶಿವಮೊಗ್ಗ ಜಿಲ್ಲೆ ಸಾಗರದ ಉದ್ಯಮಿ ಮೊಹಮ್ಮದ್ ಶರೀಫ್ ಮಾಹಿತಿ ನೀಡಿದ ಹಿನ್ನೆಲೆಯಲ್ಲಿ ಅವರ ಖಾತೆಯಿಂದ ಹಣ ದೋಚಲಾಗಿದೆ.
ಮೊಹಮ್ಮದ್ ಶರೀಫ್ ಅವರ ಮೊಬೈಲ್ ಗೆ ಪಾನ್ ಕಾರ್ಡ್ –ಆಧಾರ್ ಅಪ್ಡೇಟ್ ಮಾಡಲು ವಾಟ್ಸಾಪ್ ಸಂದೇಶ ಬಂದಿದ್ದು, ಅದು ನಿಜವೆಂದು ತಿಳಿದ ಶರೀಫ್ ತಮ್ಮ ಪಾನ್ ಹಾಗೂ ಆಧಾರ್ ಲಿಂಕ್ ಎಂದು ಭಾವಿಸಿ ಮಾಹಿತಿ ನೀಡಿದ್ದಾರೆ. ಈ ವೇಳೆ ಅವರ ಖಾತೆಯಿಂದ ಹಣ ವರ್ಗಾವಣೆಯಾಗಿರುವ ಸಂದೇಶ ಬಂದಿದೆ. ಗಾಬರಿಯಾದ ಶರೀಫ್ ಬ್ಯಾಂಕಿಗೆ ಹೋಗಿ ವಿಚಾರಿಸಿದಾಗ ಅವರು ವಂಚನೆಗೊಳಗಾಗಿರುವುದು ಗೊತ್ತಾಗಿದೆ. ಸಾಗರ ನಗರ ಠಾಣೆಗೆ ಶರೀಫ್ ದೂರು ನೀಡಿದ್ದಾರೆ.