alex Certify ಹೂಡಿಕೆ, ಉಚಿತ ಪ್ರವಾಸ, ಸದಸ್ಯರ ಸೇರಿಸಿದ್ರೆ ಹಣ ವಾಪಸ್ ಹೆಸರಲ್ಲಿ ಸಾರ್ವಜನಿಕರಿಗೆ ಟೋಪಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹೂಡಿಕೆ, ಉಚಿತ ಪ್ರವಾಸ, ಸದಸ್ಯರ ಸೇರಿಸಿದ್ರೆ ಹಣ ವಾಪಸ್ ಹೆಸರಲ್ಲಿ ಸಾರ್ವಜನಿಕರಿಗೆ ಟೋಪಿ

ಶಿವಮೊಗ್ಗ: ಮೇಕ್ ಫ್ರೀ ಟ್ರಿಪ್ಸ್ ಮತ್ತು ಮೇಕ್ ಫ್ರೀ ಮನಿ ಹೆಸರಿನಲ್ಲಿ ಜನರಿಗೆ ಮೋಸ ಮಾಡಲಾಡಿದ್ದು, ದೂರು ದಾಖಲಾಗಿದೆ.

ಕಿಶೋರಕುಮಾರ ಎಂಬುವವರಿಗೆ ನಾಗರಾಜ ಎಂಬುವವರು Make free trips ಎಂಬ ಕಂಪನಿಯ ಬಗ್ಗೆ ತಿಳಿಸಿ, ನೀವು ಈ ಕಂಪನಿಗೆ 9000 ರೂ. ಹಣ ಕಟ್ಟಿ ಸದಸ್ಯರಾಗಿ. ನೀವು ಬೇರೆ 6 ಜನ ಸದಸ್ಯರನ್ನು ನಮ್ಮ ಕಂಪನಿಗೆ ಸೇರಿಸಿದರೆ ನಿಮಗೆ ಹೊರಾಜ್ಯಕ್ಕೆ ಉಚಿತವಾಗಿ ಕರೆದುಕೊಂಡು ಹೋಗುತ್ತೇವೆ, ನೀವು ಕಟ್ಟಿದ 9000 ರೂ. ವಾಪಾಸ್ ಕೊಡುತ್ತೇವೆ ಎಂದು ಹೇಳಿದ್ದಾರೆ.

ಹಾಗೆಯೇ Make free Money ಗೆ 90,000 ರೂ. ಹೂಡಿಕೆ ಮಾಡಿದರೆ ನಾವು ನಿಮಗೆ ಬೆಂಗಳೂರುನಿಂದ ಬಾಂಬೆಗೆ ವಿಮಾನದಲ್ಲಿ ಕರೆದುಕೊಂಡು ಹೋಗಿ ತದನಂತರ ಬಾಂಬೆಯಿಂದ ಕ್ರೂಜ್ ಎಂಬ ಹಡಗಿನಲ್ಲಿ ಗೋವಾಕ್ಕೆ 2 ರಾತ್ರಿ 3 ಹಗಲು ಉಚಿತವಾಗಿ ಟ್ರಿಪ್ ಕರೆದುಕೊಂಡು ಹೋಗುತ್ತೇವೆ. ನೀವು ನಮ್ಮಲ್ಲಿ ಹಣ ಹೂಡಿಕೆ ಮಾಡಿದ್ದಕ್ಕೆ ಪ್ರತಿಫಲವಾಗಿ ಪ್ರತಿ ತಿಂಗಳು 6000 ರೂ. ನಂತೆ 33 ತಿಂಗಳು ಅಂದರೆ ಒಟ್ಟು 1,98,000 ರೂ. ನಿಮಗೆ ವಾಪಾಸ್ ಕೊಡುತ್ತೇವೆ ಎಂದು ನಂಬಿಸಿ ಮೋಸ ಮಾಡಿದ್ದಾರೆ ಎಂದು ಕಿಶೋರ್‍ ಕುಮಾರ್ ಎಂಬುವವರು ಜಯನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.

ಉಳಿದ ಆರೋಪಿಗಳಾದ ಮಹಮದ್ ಲತೀಫ್, ಕಿಶೋರ್ ಬಿ.ಕೆ., ಮಹಮದ್ ಅಶ್ರಫ್ ಇವರು ಹರ್ಷ ಫರ್ನ್ ಇನ್ ಹೋಟೇಲ್ ಹಾಗೂ ಇತರೆ ಹೋಟೇಲ್‍ಗಳಲ್ಲಿ ಸಾರ್ವಜನಿಕರನ್ನು ಸೇರಿಸಿ ಕಾರ್ಯಕ್ರಮ ಮಾಡಿ Make free trips ಹಾಗೂ Make free Money ಬಗ್ಗೆ ನಂಬಿಕೆ ಬರುವಂತೆ ಮಾಡಿದ್ದರಿಂದ ಅವರ ಮಾತನ್ನು ನಂಬಿ ಕಿಶೋರಕುಮಾರ್‍ ಆರೋಪಿ ನಾಗರಾಜಗೆ ಫೋನ್ ಪೇ/ ಗೂಗಲ್ ಪೇ  ಹಾಗೂ ನಗದು ರೂಪದಲ್ಲಿ ಒಟ್ಟು 7,52,370 ರೂ., ಕಿಶೋರ್ ಗೆ 1,16,000 ರೂ., ಮಹಮದ್ ಆಶ್ರಫ್ ಬ್ಯಾಂಕ್ ಖಾತೆಗೆ 1,00,000 ರೂ. ಹಾಗೂ ಮಹಮದ್ ಲತೀಫ್ ಅವರ ಹೆಂಡತಿ ಫಾತೀಮಾ ಅವರ  ಕೆನರಾ ಬ್ಯಾಂಕ್ ಖಾತೆಗೆ 2,80,000 ರೂ.ಗಳನ್ನು ಹಾಕಿದ್ದಾರೆ.

ಆದರೆ ದೂರುದಾರ ಹಾಗೂ ಅವರ ಕುಟುಂಬದರವರಿಗೆ ಒಡಿಶಾ ಹಾಗೂ ಗೋವಾಕ್ಕೆ ಪ್ರವಾಸ ಕರೆದುಕೊಂಡು ಹೋಗಿದ್ದು, ಆ ಕಂಪನಿಯಿಂದ ಇದುವರೆಗೆ 12000 ರೂ. ಮಾತ್ರ ವಾಪಾಸ್ ಕೊಟ್ಟಿರುತ್ತಾರೆ.  ಉಳಿದ ಹಣವನ್ನು ಕೊಡದೇ ಮೋಸ ಮಾಡಿರುತ್ತಾರೆ.

ಅವರಂತೆ ಈ ಕಂಪನಿಗೆ ಹೂಡಿಕೆ ಮಾಡಿದ್ದ ವಿನೋಬನಗರ ವಾಸಿ ಪ್ರಸನ್ನಗೆ 90000 ರೂ., ಶಿವಮೊಗ್ಗ ಆರ್.ಎಂ.ಎಲ್. ನಗರ ವಾಸಿ ಗೈಬಾನ್ ಖಾನ್ ಗೆ 1,80,000 ರೂ., ನವುಲೆ ವೆಂಕಟಾಪುರದ ದೊಡ್ಡವೀರಪ್ಪಗೆ 218000 ರೂ. ಗಾಂಧಿಬಜಾರ್ ನ ಮೋಹನ್ 4,85,000 ರೂ, ಹೀಗೆ ಅನೇಕರಿಂದ ಲಕ್ಷಾಂತರ ರೂ ಪಡೆದು ವಂಚಿಸಿದ್ದಾರೆ ಎಂದು ಆರೋಪಿಸಲಾಗಿದೆ.

ವಂಚನೆಗೊಳಗಾದವರು ನೀಡಿದ ದೂರಿನ ಮೇರೆಗೆ ಜಯನಗರ ಪೊÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪ್ರಕರಣ ತನಿಖೆಯಲ್ಲಿದೆ. Make free trips ಹಾಗೂ Make free Money ಗೆ ಹಣ ಹೂಡಿಕೆ ಮಾಡಿ ಮೋಸ ಹೋದವರು ಯಾರಾದರೂ ಇದ್ದಲ್ಲಿ ಜಯನಗರ ಪೊಲೀಸ್ ಠಾಣೆಗೆ ಭೇಟಿ ನೀಡಿ ಮಾಹಿತಿ ನೀಡುವಂತೆ ಜಯನಗರ ಪೊಲೀಸ್ ಸಬ್ ಇನ್ ಸ್ಪೆಕ್ಟರ್ ತಿಳಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...