ಧಾರವಾಡ: ಎಪಿಸಿ ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿ ಶಿವಪ್ಪ ಎಫ್. ಪಡೆಪ್ಪನವರ ಈತನ ಬದಲಾಗಿ ಬೇರೆ ವ್ಯಕ್ತಿ ದೈಹಿಕ ಸಾಮಥ್ರ್ಯ ಮತ್ತು ದೇಹದಾಢ್ರ್ಯತೆ ಪರೀಕ್ಷೆ[ET/PST] ಗೆ ಹಾಜರಾಗಿ ವಂಚನೆ ಎಸಗಿದ್ದು, ಬೆರಳಚ್ವು ಸಾಕ್ಷಿಯಿಂದ ಧಾರವಾಡ ಎಸ್.ಪಿ. ಕೃಷ್ಣಕಾಂತ ಕೈಗೆ ಸಿಕ್ಕಿಹಾಕಿಕೊಂಡಿದ್ದಾರೆ.
ಧಾರವಾಡ ಜಿಲ್ಲಾ ಪೊಲೀಸ್ ಘಟಕದ ಸಶಸ್ತ್ರ ಮೀಸಲು ಪೊಲೀಸ್ ಹುದ್ದೆಗಳ ನೇಮಕಾತಿ ಪ್ರಕ್ರಿಯೆಯನ್ನು 2020-21 ನೇ ಸಾಲಿನಲ್ಲಿ ಕೈಗೊಳ್ಳಲಾಗಿತ್ತು. ಅದರಂತೆ ಅರ್ಹ 1:5 ಅಭ್ಯರ್ಥಿಗಳ ದೈಹಿಕ ಸಾಮರ್ಥ್ಯ ಮತ್ತು ದೇಹದಾರ್ಢ್ಯತೆ ಪರೀಕ್ಷೆ[ET/PST] ಯನ್ನು ದಿನಾಂಕ 19-12-2020 ರಂದು ಧಾರವಾಡ ನಗರದ ಆರ್.ಎನ್. ಶೆಟ್ಟಿ ಕ್ರೀಡಾಂಗಣದಲ್ಲಿ ಕೈಗೊಳ್ಳಲಾಗಿತ್ತು. ಆಯ್ಕೆಯಾದ ಅಭ್ಯರ್ಥಿಗಳ ವೈಧ್ಯಕೀಯ ಪರೀಕ್ಷೆಯನ್ನು ದಿನಾಂಕ 13-01-2021 ರಂದು ಜಿಲ್ಲಾ ಆಸ್ಪತ್ರೆ, ಧಾರವಾಡದಲ್ಲಿ ನಡೆಸಲಾಗಿತ್ತು.
ಎಪಿಸಿ ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿ ಶಿವಪ್ಪ ಎಫ್. ಪಡೆಪ್ಪನವರ ದಿನಾಂಕ 17-03-2021 ನೇಮಕಾತಿ ಆದೇಶ ಪಡೆದು ಕರ್ತವ್ಯಕ್ಕೆ ದಿನಾಂಕ 03-04-2021 ರಂದು ಕರ್ತವ್ಯಕ್ಕೆ ವರದಿ ಮಾಡಿಕೊಂಡಿರುತ್ತಾನೆ.
ಅಭ್ಯರ್ಥಿಗಳ(1) ದೈಹಿಕ ಸಾಮಥ್ರ್ಯ ಮತ್ತು ದೇಹದಾಢ್ರ್ಯತೆ ಪರೀಕ್ಷೆ [ET/PST], (2) ವೈಧ್ಯಕೀಯ ಪರೀಕ್ಷೆ ಮತ್ತು (3) ನೇಮಕಾತಿ ಹೊಂದಿ ಕರ್ತವ್ಯಕ್ಕೆ ವರದಿ ಮಾಡಿದ ನಂತರ (ಪೊಲೀಸ್ ಅಧೀಕ್ಷಕರು, ಧಾರವಾಡ ಅವರು ನೇಮಕಾತಿ ಸಂದರ್ಭದಲ್ಲಿ ಅಭ್ಯರ್ಥಿಗಳಿಂದ ಪಡೆದ) ಬೆರಳು ಮುದ್ರೆಗಳನ್ನು ಪರಿಶೀಲಿಸಿ ವರದಿ ನೀಡುವಂತೆ ಸೂಚಿಸಿದ್ದರನ್ವಯ ಪೊಲೀಸ್ ಇನ್ಸಪೆಕ್ಟರ್, ಬೆರಳು ಮುದ್ರೆ ಘಟಕ, ಜಿ.ಪೊ.ಕ., ಧಾರವಾಡ ಅವರು ಪರಿಶೀಲನೆ ಮಾಡಿ ವರದಿಯನ್ನು ನೀಡಿರುತ್ತಾರೆ.
ಬೆರಳು ಮುದ್ರೆ ತಜ್ಞರ ವರದಿಯಲ್ಲಿ ಬೆರಳು ಮುದ್ರೆಗಳನ್ನು ಪರಿಶೀಲಿಸಿದ್ದರಲ್ಲಿ ವೈಧ್ಯಕೀಯ ಪರೀಕ್ಷೆಯ ಕಾಲಕ್ಕೆ ಮತ್ತು ದೇಹದಾರ್ಢ್ಯತೆ ಪರೀಕ್ಷೆಯ ಕಾಲಕ್ಕೆ ಪಡೆದ ಎಡಗೈ ಹೆಬ್ಬರಳಿನ ಮುದ್ರೆಯೊಂದಿಗೆ ಹೊಂದಾಣಿಕೆಯಾಗಿರುವುದಿಲ್ಲ ಎಂಬ ತಜ್ಞರ ಅಭಿಪ್ರಾಯದ ವರದಿ ನೀಡಿರುತ್ತಾರೆ.
ಆದ್ದರಿಂದ ಅಭ್ಯರ್ಥಿಯಾದ ಶಿವಪ್ಪ ಎಫ್. ಪಡೆಪ್ಪನವರ ನೇಮಕಾತಿ ಹೊಂದುವ ಉದ್ದೇಶದಿಂದ ನಕಲಿ ಅಭ್ಯರ್ಥಿಗಳಿಂದ ಪರೀಕ್ಷೆ ಬರೆಯಿಸುವ ಉದ್ದೇಶದಿಂದ ಮಂಜುನಾಥ ಕರಿಗಾರನನ್ನು ಸಂಪರ್ಕಿಸುತ್ತಾನೆ. ಆತನು ಗೋಕಾಕ್ ತಾಲ್ಲೂಕಿನ ಬಸವರಾಜ ಮೇಲ್‍ಮಟ್ಟಿ ನೇತೃತ್ವದ ತಂಡದವರನ್ನು ಸಂಪರ್ಕಿಸಿದ್ದು, ಅವರು ಈ ಕೆಲಸದಲ್ಲಿ ಸಹಾಯ ಮಾಡುತ್ತಾರೆ ಎಂದು ಪರಿಚಯಿಸುತ್ತಾನೆ.
ನಂತರ ಶಿವಪ್ಪ, ಬದಲಿ ಒಬ್ಬನನ್ನು ನಿಲ್ಲಿಸಿ ಪರೀಕ್ಷೆ ಪಾಸ್ ಮಾಡಿಕೊಡಲು ಬಸವರಾಜ ಮೇಲ್‍ಮಟ್ಟಿಗೆ ಕೇಳಿಕೊಳ್ಳುತ್ತಾನೆ. ಅದಕ್ಕೆ ಮೇಲ್‍ಮಟ್ಟಿಯು 2,30,000 ರೂಪಾಯಿಗೆ ಬೇಡಿಕೆ ಇಟ್ಟು ಹಣ ಪಡೆದುಕೊಳ್ಳುತ್ತಾನೆ.
ಈ ಗುಂಪಿನಲ್ಲಿರುವ ಬಸವರಾಜ ದೇವರಮನಿ 1,95,000 ರೂ., ಆನಂದ ಕೋಳೂರ 30,000 ರೂ. ಹಂಚಿಕೊಂಡಿರುತ್ತಾರೆ. ಆ ಗುಂಪು ಆನಂದ ಕೋಳೂರು ರವರನ್ನು ಶಿವಪ್ಪ ಎಫ್. ಪಡೆಪ್ಪನವರ ಬದಲಿಗೆ ದೈಹಿಕ ಪರೀಕ್ಷೆಗೆ ಹಾಜರಾಗುವಂತೆ ಮಾಡಿ ಅರ್ಹತೆ ಪಡೆದಿದ್ದು, ನೇಮಕಾತಿ ಪಟ್ಟಿಯಲ್ಲಿ ಆಯ್ಕೆಯಾಗಿರುತ್ತಾನೆ.
ಈ ಪ್ರಕರಣದ ಆರೋಪಿ ಆನಂದ ಕೋಳೂರನು ಹಾಸನದ ನಗರದ ಬಡವಾಣೆ ಠಾಣೆಯ ವ್ಯಾಪ್ತಿಯಲ್ಲಿ ಇದೇ ತರಹದ ಪ್ರಕರಣವೊಂದರಲ್ಲಿ ಭಾಗಿಯಾಗಿರುತ್ತಾನೆ ಎನ್ನಲಾಗಿದೆ. ಸರ್ಕಾರಕ್ಕೆ ವಂಚಿಸಿ ಬೇರೆ ವ್ಯಕ್ತಿಯನ್ನು ತನ್ನ ಬದಲಾಗಿ ಹಾಜರಾಗಿ ಸಹಿ ಮಾಡುವಂತೆ ದೈಹಿಕ ಪರೀಕ್ಷೆಗೆ ಹಾಜರಾಗಲು ದುಷ್ಪ್ರೇರಣೆ ನೀಡಿದ್ದು, ಅದರಂತೆ ಬೇರೆ ವ್ಯಕ್ತಿ ಶಿವಪ್ಪ ಎಫ್. ಪಡೆಪ್ಪನವರ ಈತನ ಹೆಸರಿನಲ್ಲಿ ದೈಹಿಕ ಪರೀಕ್ಷೆಗೆ ಹಾಜರಾಗಿ ತಾನೇ ನೈಜ ಅಭ್ಯರ್ಥಿ ಎಂದು ನಂಬಿಸಿ ಸುಳ್ಳು ದಾಖಲಾತಿಗಳನ್ನು ನೀಡಿ ವಂಚಿಸಿದ್ದಾನೆ. ಶಿವಪ್ಪ ಎಫ್ ಪಡೆಪ್ಪನವರ ದೈಹಿಕ ಪರೀಕ್ಷೆಯಲ್ಲಿ ಅರ್ಹತೆ ಪಡೆಯಲು ಅಪರಾಧ ಎಸಗಿರುವುದು ದಾಖಲಾತಿಗಳಿಂದ ಕಂಡುಬಂದಿದ್ದು, ಈ ಕುರಿತು ಸೂಕ್ತ ಕಾನೂನು ಕ್ರಮ ಕೈಗೊಳ್ಳಲು ಪೊಲೀಸ್ ನೀರೀಕ್ಷಕರು ಉಪ-ನಗರ ಪೊಲೀಸ್ ಠಾಣೆ, ಧಾರವಾಡ ಅವರಿಗೆ ದೂರು ಸಲ್ಲಿಸಲಾಗಿದೆ.
ಅರ್ಜಿ ಸಲ್ಲಿಸುವಾಗ ಮತ್ತು ದೈಹಿಕ ಪರೀಕ್ಷೆಗೆ ಹಾಜರಾಗುವಾಗ ನೀಡಿದ ಬೆರಳಚ್ಚು ಸಾಕ್ಷಿಯಿಂದಾಗಿ ಈ ಖದೀಮರು ಎಸ್.ಪಿ. ಕೃಷ್ಣಕಾಂತ ಅವರ ಕೈಗೆ ಸಿಕ್ಕಿ ಬಿದ್ದಿದ್ದಾರೆ. ಪ್ರಕರಣ ಪತ್ತೆ ಹಚ್ಚುವಲ್ಲಿ ಶ್ರಮಿಸಿದ ಜಿಲ್ಲಾ ಪೊಲೀಸ್ ವಿಭಾಗದ ಬೆರಚ್ಚು ತಜ್ಞ ವಿಭಾಗದ ಅಧಿಕಾರಿ ಮತ್ತು ಸಿಬ್ಬಂದಿಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಭಿನಂದಿಸಿ, ಬಹುಮಾನ ಘೋಷಿಸಿದ್ದಾರೆ.