
ಶಿವಮೊಗ್ಗ: ನೋಟಿನ ಲಕ್ಕಿ ನಂಬರ್ ನಂಬಿದ ವ್ಯಕ್ತಿಗೆ 78,000 ರೂ. ವಂಚಿಸಿದ ಘಟನೆ ಶಿವಮೊಗ್ಗ ಜಿಲ್ಲೆ ಕುಂಸಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಹೊಸೂರಿನ ಮಂಜುನಾಥ್ ಅವರು ವಿಶೇಷ ಸಂಖ್ಯೆಯ 500 ರೂಪಾಯಿ ನೋಟು ಮಾರಾಟ ಮಾಡಲು ಹೋಗಿ ಆನ್ಲೈನ್ ಮೂಲಕ 78,450 ರೂ. ಕಳೆದುಕೊಂಡಿದ್ದಾರೆ.
ಮಂಜುನಾಥ್ ಅವರ ಅಜ್ಜನಿಗೆ 786 ಸಂಖ್ಯೆ ಇರುವ 500 ರೂಪಾಯಿ ನೋಟು ಸಿಕ್ಕಿದ್ದು, ಜಾಲತಾಣದಲ್ಲಿ 786 ಸಂಖ್ಯೆಯ ನೋಟು ಇದ್ದರೆ 12.74 ರೂ. ನೀಡುವುದಾಗಿ ವಂಚಕರು ಹಾಕಿದ್ದ ಪೋಸ್ಟ್ ಗಮನಿಸಿದ ಮಂಜುನಾಥ್ ಆಸೆಯಿಂದ ಅವರನ್ನು ಸಂಪರ್ಕಿಸಿದ್ದಾರೆ.
ವಂಚಕ ಮೊದಲಿಗೆ ತನ್ನ ಖಾತೆಗೆ 750 ರೂ. ಫೋನ್ ಮಾಡುವಂತೆ ತಿಳಿಸಿದ್ದು, ಅಂತೆಯೇ ಮಂಜುನಾಥ್ ಹಣ ಕಳಿಸಿದ್ದಾರೆ. ಮತ್ತೆ ಮತ್ತೆ ಹಣ ಕಳಿಸಿಕೊಂಡ ವ್ಯಕ್ತಿ ಒಟ್ಟಾರೆ 78,450 ರೂ. ಪಡೆದುಕೊಂಡು ವಂಚಿಸಿದ್ದಾನೆ. ವಂಚನೆಗೊಳಗಾಗಿರುವುದು ಗೊತ್ತಾದ ನಂತರ ಮಂಜುನಾಥ್ ಕುಂಸಿ ಠಾಣೆಗೆ ದೂರು ನೀಡಿದ್ದಾರೆ.