alex Certify ಮ್ಯಾಟ್ರಿಮೋನಿಯಲ್ ನಲ್ಲಿ ಪರಿಚಯ; ಮದುವೆಯಾಗುವುದಾಗಿ ನಂಬಿಸಿ ಮಹಿಳೆಯಿಂದ 13.55 ಲಕ್ಷ ರೂ. ವಂಚನೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮ್ಯಾಟ್ರಿಮೋನಿಯಲ್ ನಲ್ಲಿ ಪರಿಚಯ; ಮದುವೆಯಾಗುವುದಾಗಿ ನಂಬಿಸಿ ಮಹಿಳೆಯಿಂದ 13.55 ಲಕ್ಷ ರೂ. ವಂಚನೆ

ಶಿವಮೊಗ್ಗ: ಮದುವೆಯಾಗುವುದಾಗಿ ನಂಬಿಸಿ ಮಹಿಳೆಯಿಂದ 13.55 ಲಕ್ಷ ರೂಪಾಯಿ ಹಣ ಪಡೆದುಕೊಂಡು ವಂಚಿಸಿದ ಘಟನೆ ನಡೆದಿದ್ದು, ಶಿವಮೊಗ್ಗದ ಸಿಇಎನ್ ಠಾಣೆಗೆ ವಂಚನೆಗೊಳಗಾದ ಮಹಿಳೆ ದೂರು ನೀಡಿದ್ದಾರೆ.

ಚಿಕ್ಕಮಗಳೂರು ಜಿಲ್ಲೆ ತರೀಕೆರೆಯ ಮಹಿಳೆಗೆ ಮ್ಯಾಟ್ರಿಮೋನಿಯಲ್ ವೊಂದರಲ್ಲಿ ಪರಿಚಯವಾದ ವಿಜಯರಾಜ್ ಗೌಡ ಎಂಬಾತ ವಂಚಿಸಿರುವುದಾಗಿ ಆರೋಪಿಸಲಾಗಿದೆ. ಬೆಂಗಳೂರಿನಲ್ಲಿ ವಾಸವಾಗಿರುವ ವಿಜಯರಾಜ್ ಗೌಡ ಮ್ಯಾಟ್ರಿಮೋನಿಯಲ್ ಸೈಟ್ ನಲ್ಲಿ ಮಹಿಳೆಗೆ ಪರಿಚಯವಾಗಿದ್ದು, ಮೊಬೈಲ್ ಸಂಖ್ಯೆ ವಿನಿಮಯ ಮಾಡಿಕೊಂಡು ಚಾಟಿಂಗ್ ಮಾಡಿದ್ದಾರೆ.

ತನ್ನ ಮನೆ ಮೇಲೆ ಐಟಿ ದಾಳಿಯಾಗಿದ್ದು, ಹಣ ಬೇಕಿದೆ ಎಂದು ವಿಜಯರಾಜ್ ಗೌಡ ಮಹಿಳೆಗೆ ಸಂದೇಶ ಕಳುಹಿಸಿದ್ದು, ಇದನ್ನು ನಂಬಿದ ಮಹಿಳೆ ಆಗಸ್ಟ್ 5ರಿಂದ 22ರ ವರೆಗೆ ಹಂತ ಹಂತವಾಗಿ 13.55 ಲಕ್ಷ ರೂ. ಆತನ ಖಾತೆಗೆ ಹಾಕಿದ್ದಾರೆ. ಕೊಟ್ಟ ಹಣ ಕೇಳಿದಾಗ ಆತ ಕರೆ ಸ್ವೀಕರಿಸಿಲ್ಲ. ವಂಚನೆಗೊಳಗಾದ ಮಹಿಳೆ ಸಿಇಎನ್ ಠಾಣೆಗೆ ದೂರು ನೀಡಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...