
ಬೆಂಗಳೂರು: ಬೆಂಗಳೂರಿನಲ್ಲಿ ಮತ್ತೊಂದು ಬಹುಕೋಟಿ ರೂಪಾಯಿ ವಂಚನೆ ಪ್ರಕರಣ ಬೆಳಕಿಗೆ ಬಂದಿದೆ. ಸಿರಿವೈಭವ ಪತ್ತಿನ ಸಹಕಾರ ಸಂಘದಿಂದ ಹೂಡಿಕೆದಾರರಿಗೆ ವಂಚಿಸಲಾಗಿದೆ ಎಂದು ಆರೋಪಿಸಲಾಗಿದೆ.
ನಾಲ್ಕು ಶಾಖೆಗಳಿಂದ ಎರಡು ಸಾವಿರ ಹೂಡಿಕೆದಾರರಿಗೆ ವಂಚಿಸಲಾಗಿದೆ. ಉತ್ತರಹಳ್ಳಿ, ಆರ್.ಆರ್. ನಗರ, ಬಿಳೇಕಳ್ಳಿ, ಬಸವೇಶ್ವರನಗರದ ಶಾಖೆಗಳಲ್ಲಿ ಹೂಡಿಕೆದಾರರಿಗೆ ವಂಚಿಸಲಾಗಿದೆ.
ಬ್ಯಾಂಕಿನ ಗ್ರಾಹಕರಿಗೆ ಕೋಟ್ಯಂತರ ರೂಪಾಯಿ ವಂಚಿಸಿರುವುದು ಬೆಳಕಿಗೆ ಬಂದಿದ್ದು, ಈ ಕುರಿತು ಸುಬ್ರಹ್ಮಣ್ಯಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸಿರಿವೈಭವ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ನಾಗವಲ್ಲಿ, ಪತಿ ರಾಜೇಶ್, ಅಪ್ಪಾಲಾಲ್ ಚಕೋಲಿ, ಹಿರೇಮಠ್ ಮತ್ತು ನಿರ್ದೇಶಕರ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ. ಸುಬ್ರಮಣ್ಯಪುರ ಪೊಲೀಸರು ರಾಜೇಶ್ ಮತ್ತು ನಾಗವಲ್ಲಿ ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ ಎನ್ನಲಾಗಿದ್ದು, ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.