ಆಪ್ ಮೂಲಕ ಆನ್ಲೈನ್ ಪೇಮೆಂಟ್ ವೇಳೆ ಹುಷಾರಾಗಿರುವುದು ಒಳ್ಳೆಯದು. ಇಲ್ಲದಿದ್ದರೆ ನಿಮ್ಮ ಖಾತೆಗೆ ಹಣ ಸಂದಾಯವಾದಂತೆ ತೋರಿಸಿ ಯಾಮಾರಿಸುವ ಆಪ್ ಗಳು ಕೂಡ ಇವೆ.
ಗೂಗಲ್ ಪೇ, ಅಮೆಜಾನ್ ಪೇ, ಪೇಟಿಎಂ ಮೊದಲಾದವುಗಳ ಮೂಲಕ ಆನ್ಲೈನ್ ಪೇಮೆಂಟ್ ಮಾಡುವ ಸಂದರ್ಭದಲ್ಲಿ ನಿಮ್ಮ ಖಾತೆಗೆ ಹಣ ಬಂದಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಿ. ಅಪರಿಚಿತರು ನಿಮಗೆ ಹಣ ಕಳಿಸಿದಂತೆ ತೋರಿಸಿದರೂ, ವಾಸ್ತವದಲ್ಲಿ ನಿಮ್ಮ ಖಾತೆಗೆ ಹಣ ಬಂದಿರುವುದಿಲ್ಲ. ಓರಿಜಿನಲ್ ಆಪ್ ಗಳ ರೀತಿಯಲ್ಲಿಯೇ ಇರುವ ಪೇಮೆಂಟ್ ಅಪ್ ಗಳ ಮೂಲಕ ವಂಚನೆ ಜಾಲ ಸಕ್ರಿಯವಾಗಿದೆ. ಹೀಗಾಗಿ ಅಪರಿಚಿತರಿಂದ ಆನ್ಲೈನ್ ಪೇಮೆಂಟ್ ಮಾಡಿಸಿಕೊಳ್ಳುವ ಸಂದರ್ಭದಲ್ಲಿ ಹಣ ಬಂದಿರುವುದನ್ನು ಪರಿಶೀಲಿಸಿಕೊಳ್ಳಿ.
ಈ ಆಪ್ ಗಳಲ್ಲಿ ನಿಮ್ಮ ಫೋನ್ ನಂಬರ್, ಹೆಸರು, ಟ್ರಾನ್ಸಾಕ್ಷನ್ ಐಡಿ ಎಲ್ಲವನ್ನು ತೋರಿಸಿ ಸಕ್ಸಸ್ ಫುಲ್ ಎಂದು ಕೂಡ ಹಣ ಸಂದಾಯವಾದ ಬಗ್ಗೆ ತೋರಿಸುತ್ತದೆ. ಆದರೆ ವಾಸ್ತವದಲ್ಲಿ ನಿಮ್ಮ ಖಾತೆಗೆ ಹಣ ಬಂದಿರುವುದಿಲ್ಲ. ಈ ರೀತಿಯ ಆಪ್ ಗಳ ಮೂಲಕ ವಂಚಿಸುವ ಜಾಲ ಸಕ್ರಿಯವಾಗಿದೆ. ಖಾತೆಗೆ ಹಣ ಬಂದ ಮೆಸೇಜ್ ಖಚಿತಪಡಿಸಿಕೊಳ್ಳಿ. ಇಲ್ಲವಾದರೆ ನಿಮ್ಮನ್ನು ಯಾಮಾರಿಸುತ್ತಾರೆ.