ಮೈಸೂರು : ವಂಚನೆ ಆರೋಪಕ್ಕೆ ಸಂಬಂಧಿಸಿದಂತೆ 10 ಮಂದಿ ಆರ್ ಟಿ ಒ ( RTO) ಅಧಿಕಾರಿಗಳು ಸೇರಿ 35 ಜನರ ವಿರುದ್ಧ ಎಫ್ ಐ ಆರ್ ( FIR) ದಾಖಲಾಗಿದೆ.
ನಕಲಿ ರಶೀದಿ ಬಳಕೆ ಮಾಡಲಾಗುತ್ತಿದೆ ಹಾಗೂ ಸಂಬಂಧಪಡದ ವ್ಯಕ್ತಿಗಳು ಕಚೇರಿಯಲ್ಲಿ ಕೆಲಸ ಮಾಡಿದ್ದಾರೆ ಎಂದು ಆರೋಪಿಸಿ ಪ್ರದೀಪ್ ಕುಮಾರ್ ಎಂಬುವವರು ದೂರು ನೀಡಿದ್ದಾರೆ.
RTO ಜಂಟಿ ಸಾರಿಗೆ ಆಯುಕ್ತ ಸಿ ಟಿ ಮೂರ್ತಿ, ಪ್ರಾದೇಶಿಕ ಸಾರಿಗೆ ಅಧಿಕಾರಿ ದೇವಿಕಾ ಸೇರಿ 35 ಜನರ ವಿರುದ್ಧ ಲಕ್ಷ್ಮಿಪುರ ಪೊಲೀಸ್ ಠಾಣೆಯಲ್ಲಿ ಎಫ್ ಐ ಆರ್ ದಾಖಲಾಗಿದೆ ಎಂದು ತಿಳಿದು ಬಂದಿದೆ.