ಕಷ್ಟಪಟ್ಟು ಸಂಪಾದನೆ ಮಾಡಿದ ನಿಮ್ಮ ದುಡ್ಡನ್ನು ಸುರಕ್ಷಿತವಾಗಿಡಲು ಬ್ಯಾಂಕುಗಳು ಆದ್ಯತೆ ನೀಡುತ್ತವೆ. ಇದೇ ವಿಚಾರವಾಗಿ ದಂಧೆಕೋರರ ಬಗ್ಗೆ ಜಾಗರೂಕವಾಗಿರಲು ಎಸ್‌ಬಿಐ ತನ್ನ ಗ್ರಾಹಕರಿಗೆ ಆಗಾಗ ಎಚ್ಚರಿಕೆ ಕೊಡುತ್ತಲೇ ಬಂದಿದೆ.
ದೇಶದ ಸಾರ್ವಜನಿಕ ಸ್ವಾಮ್ಯದ ಅತಿ ದೊಡ್ಡ ಬ್ಯಾಂಕ್ ಆಗಿರುವ ಎಸ್‌ಬಿಐ ಟ್ವಿಟರ್ ಮೂಲಕ ತನ್ನ ಗ್ರಾಹಕರಿಗೆ ಕೆಲವೊಂದು ಮಹತ್ವದ ಅಲರ್ಟ್‌ಗಳನ್ನು ಕೊಟ್ಟಿದ್ದು, ಗ್ರಾಹಕರು ತಮ್ಮ ಖಾತೆಗಳಿಗೆ ಸಂಬಂಧಿಸಿದಂತೆ ಸೂಕ್ಷ್ಮ ಮಾಹಿತಿಗಳನ್ನು ಆನ್ಲೈನ್ ಅಥವಾ ಆಫ್ಲೈನ್ ಮೂಲಕ ವಿನಿಮಯ ಮಾಡಿಕೊಳ್ಳಬಾರದು ಎಂದಿದೆ. ಯಾವುದೇ ಅಪರಿಚಿತ ಮೂಲದಿಂದ ಅಪ್ಲಿಕೇಶನ್‌ಗಳನ್ನು ಡೌನ್ಲೋಡ್ ಮಾಡಿಕೊಳ್ಳದಿರಲು ಎಸ್‌ಬಿಐ ಅದಾಗಲೇ ಸೂಚನೆ ಕೊಟ್ಟಿದೆ.
ಎಸ್‌ಬಿಐ, ಆರ್‌ಬಿಐ, ಸರ್ಕಾರೀ ಕಚೇರಿಗಳು, ಪೊಲೀಸ್ ಅಥವಾ ಕೆವೈಸಿ ಪ್ರತಿನಿಧಿಗಳು ಎಂದು ಹೇಳಿಕೊಂಡು ಕರೆ ಮಾಡುವವರ ವಿಚಾರದಲ್ಲೂ ಜಾಗರೂಕವಾಗಿರಲು ಎಸ್‌ಬಿಐ ತನ್ನ ಟ್ವೀಟ್ ಮೂಲಕ ಗ್ರಾಹಕರಿಗೆ ಸೂಚಿಸಿದೆ.
ಇಂಜಿನಿಯರಿಂಗ್ ಸೇರಿ ವೃತ್ತಿಪರ ಕೋರ್ಸ್ ಸೇರುವ ವಿದ್ಯಾರ್ಥಿಗಳಿಗೆ ಮುಖ್ಯ ಮಾಹಿತಿ, ಸಿಇಟಿಗೆ ಇಂದಿನಿಂದ ಅರ್ಜಿ
ಕೆಳಕಂಡ ಅಂಶಗಳನ್ನು ಗಮನದಲ್ಲಿಟ್ಟುಕೊಳ್ಳಲು ಗ್ರಾಹಕರಿಗೆ ಎಸ್‌ಬಿಐ ಸೂಚಿಸಿದೆ:
1. ಹುಟ್ಟಿದ ದಿನಾಂಕ, ಡೆಬಿಟ್ ಕಾರ್ಡ್ ಸಂಖ್ಯೆ, ಅಂತರ್ಜಾಲ ಬ್ಯಾಂಕಿಂಗ್ ಐಡಿ/ಪಾಸ್‌ವರ್ಡ್, ಡೆಬಿಡ್ ಕಾರ್ಡ್ ಪಿನ್, ಓಟಿಪಿ ಹಾಗೂ ಇತರೆ ವೈಯಕ್ತಿಕ ಮಾಹಿತಿಗಳನ್ನು ಹಂಚಿಕೊಳ್ಳಬಾರದು.
2. ಎಸ್‌ಬಿಐ, ಆರ್‌ಬಿಐ, ಸರ್ಕಾರೀ ಕಚೇರಿಗಳು, ಪೊಲೀಸ್ ಅಥವಾ ಕೆವೈಸಿ ಪ್ರತಿನಿಧಿಗಳು ಎಂದು ಹೇಳಿಕೊಂಡು ಕರೆ ಮಾಡುವವರ ವಿಚಾರದಲ್ಲೂ ಜಾಗರೂಕವಾಗಿರಬೇಕು.
3. ದೂರವಾಣಿ ಕರೆಗಳು/ಇಮೇಲ್‌ಗಳನ್ನು ಆಧರಿಸಿ ಯಾವುದೇ ಮೊಬೈಲ್ ಅಪ್ಲಿಕೇಶನ್ ಅನ್ನು ಎಸ್‌ಬಿಐ ಗ್ರಾಹಕರು ಡೌನ್ಲೋಡ್ ಮಾಡಿಕೊಳ್ಳಬಾರದು.
4. ಇಮೇಲ್, ಎಸ್‌ಎಂಎಸ್ ಮುಖಾಂತರ ಬರುವ ಯಾವುದೇ ರೀತಿಯ ಅನಧಿಕೃತವಾದ ಆಕರ್ಷಕ ಕರೆಗಳಿಗೆ ಯಾರೂ ಪ್ರತಿಕ್ರಿಯಿಸಬಾರದು.
5. ಎಸ್‌ಬಿಐ ಅಥವಾ ತನ್ನ ಯಾವುದೇ ಅಧಿಕೃತ ಪ್ರತಿನಿಧಿಗಳು ಗ್ರಾಹಕರಿಗೆ ತಮ್ಮೊಂದಿಗೆ ಪಾಸ್‌ವರ್ಡ್ ಅಥವಾ ಓಟಿಪಿಯಂಥ ಸೂಕ್ಷ್ಮ ವಿಷಯಗಳನ್ನು ವಿನಿಮಯ ಮಾಡಿಕೊಳ್ಳಲು ಕೇಳುವುದಿಲ್ಲ. ಇಂಥ ಇ-ಮೇಲ್ ಅಥವಾ ಫೋನ್ ಕರೆ ಬಂದಲ್ಲಿ ಅದನ್ನು report.phishing@sbi.co.inಗೆ ವರದಿ ಮಾಡಬೇಕು.