alex Certify ನೀರಿನ ಮೇಲೆ ಇಳಿದ ಕಾಗೋರ್ ವಿಮಾನ; ವಿಮಾನ ನಿಲ್ದಾಣ ಕ್ಲೋಸ್​…..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನೀರಿನ ಮೇಲೆ ಇಳಿದ ಕಾಗೋರ್ ವಿಮಾನ; ವಿಮಾನ ನಿಲ್ದಾಣ ಕ್ಲೋಸ್​…..!

ವಿಮಾನ ಲ್ಯಾಂಡಿಂಗ್​ಗೆ ಸಂಬಂಧಿಸಿದ ಅಹಿತಕರ ಘಟನೆಯಿಂದಾಗಿ ಫ್ರಾನ್ಸ್​ನ ದಕ್ಷಿಣ ಮೆಡಿಟರೇನಿಯನ್​ ಕರಾವಳಿಯಲ್ಲಿರುವ ವಿಮಾನ ನಿಲ್ದಾಣವನ್ನು ಅನಿದಿರ್ಷ್ಟ ಸಮಯದವರೆಗೆ ಮುಚ್ಚಲು ಕಾರಣವಾಗಿದೆ.

ವಿಮಾನ ಹಾರಾಟವನ್ನು ಸಾಮಾನ್ಯವಾಗಿ ಸುರಕ್ಷಿತ ಸಾರಿಗೆ ವಿಧಾನವೆಂದು ಪರಿಗಣಿಸಲಾಗುತ್ತದೆ ಆದರೆ ಇದು ಕೆಲಮೊಮ್ಮೆ ಅವಘಡಗಳನ್ನು ಎದುರಿಸುತ್ತದೆ. ಅದು ಪ್ರಯಾಣಿಕರಿಗೆ ಜೀವಹಾನಿ ಅಥವಾ ಸಾವಿನ ಸಮೀಪವಿರುವ ಅನುಭವಗಳಿಗೆ ಕಾರಣವಾಗಬಹುದು. ಇದು ಕಠಿಣ ಕ್ರಮಕ್ಕೂ ಕಾರಣವಾಗಿಬಿಡುತ್ತದೆ.

ವಿಮಾನವು ಅದೃಷ್ಟವಶಾತ್​ ವಾಣಿಜ್ಯ ವಿಮಾನವಲ್ಲ, ಅದರಲ್ಲಿ ಪ್ರಯಾಣಿಕರಿರಲಿಲ್ಲ. ವರದಿಗಳ ಪ್ರಕಾರ, ಬೋಯಿಂಗ್​ 737 ಶನಿವಾರ ಬೆಳಿಗ್ಗೆ ಪ್ಯಾರಿಸ್​ ಚಾರ್ಲ್ಸ್​ ಡಿ ಗೌಲ್​ ವಿಮಾನ ನಿಲ್ದಾಣದಿಂದ ಮಾಂಟ್​ಪೆಲ್ಲಿಯರ್​ಗೆ ಹೊರಟಿತು. ಆದಾಗ್ಯೂ, ಮಾಂಟ್​ಪೆಲ್ಲಿಯರ್​ ವಿಮಾನ ನಿಲ್ದಾಣದಲ್ಲಿ ಇಳಿಯುವಾಗ, ಪೆೈಲಟ್​ ರನ್​ವೇಯನ್ನು ಓವರ್​ಶಾಟ್​ ಮಾಡಿದರು, ಇದರಿಂದಾಗಿ ಅದು ರನ್​ವೇ ಪಕ್ಕದಲ್ಲಿರುವ ಸಮುದ್ರಕ್ಕೆ ಇಳಿಯಿತು.

ವಿಮಾನದ ಎಂಜಿನ್​ ನೀರಿನಲ್ಲಿ ಮುಳುಗಿ ಹಾನಿಗೆ ಕಾರಣವಾಯಿತು. ಅದೃಷ್ಟವಶಾತ್​ ಅದರಲ್ಲಿದ್ದ ಮೂವರು ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಬ್ಯೂರೋ ಡಿ’ಎನ್​ಕ್ವೆಟ್ಸ್​ ಎಟ್​ ಡಿ ಅನಾಲಿಸಸ್​ ಹಂಚಿಕೊಂಡ ಫೋಟೋಗಳು ರನ್​ವೇಯ ದಕ್ಷಿಣ ತುದಿಯಲ್ಲಿರುವ ಮುಳುಗಿರುವ ವಿಮಾನವನ್ನು ಕಾಣಬಹುದು.

ಘಟನೆಯ ಕುರಿತು ದಕ್ಷಿಣ ಫ್ರಾನ್ಸ್​ನ ಹೆರಾಲ್ಟ್​ ಇಲಾಖೆ ಹೇಳಿಕೆ ನೀಡಿದ್ದು, ಈ ಅಪಘಾತಕ್ಕೆ ಕಾರಣ ಇನ್ನೂ ತಿಳಿದುಬಂದಿಲ್ಲ ಮತ್ತು ವಿಮಾನದಲ್ಲಿದ್ದ ಮೂವರು ಸುರಕ್ಷಿತವಾಗಿದ್ದಾರೆ ಎಂದು ಹೇಳಿದ್ದಾರೆ.

ಈ ಘಟನೆಯ ಬಳಿಕ ಶನಿವಾರ 11 ವಿಮಾನಗಳನ್ನು ರದ್ದುಗೊಳಿಸಲಾಗಿದೆ. ಭಾನುವಾರದಂದು, ಮಾಂಟ್ಪೆಲ್ಲಿಯರ್​ ವಿಮಾನ ನಿಲ್ದಾಣವು ಹನ್ನೆರಡು ಬೆಳಗಿನ ಸೇವೆಗಳನ್ನು ರದ್ದುಗೊಳಿಸಿತು.

Related News

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...