ಕೊರೊನಾ ಸೋಂಕಿನ ಬಳಿಕ ಪ್ರವಾಸೋದ್ಯಮಕ್ಕೆ ನಿರ್ಬಂಧ ಹೇರಿದ್ದ ಫ್ರಾನ್ಸ್ ಇದೀಗ ತನ್ನ ನಿಯಮಗಳಲ್ಲಿ ಸಡಿಲಿಕೆ ಮಾಡಿದೆ. ಕೊರೊನಾ ಲಸಿಕೆ ಸ್ವೀಕರಿಸಿದ ವಿದೇಶಿ ಪ್ರವಾಸಿಗರು ಪ್ಯಾರೀಸ್ ಪ್ರವಾಸ ಮಾಡಬಹುದು ಎಂದು ಹೇಳಿದೆ.
ಫ್ರಾನ್ಸ್ ಪ್ರವಾಸೋದ್ಯಮ ಇಲಾಖೆ ಹೊರಡಿಸಿರುವ ಈ ಹೊಸ ಘೋಷಣೆಯು ಬುಧವಾರದಿಂದ ಕಾರ್ಯರೂಪಕ್ಕೆ ಬರಲಿದೆ.
ಆದರೆ ಕೊರೊನಾದಿಂದ ಅತಿಯಾಗಿ ಅಪಾಯವನ್ನ ಎದುರಿಸುತ್ತಿರುವ ಭಾರತ, ದಕ್ಷಿಣ ಆಫ್ರಿಕಾ ಹಾಗೂ ಬ್ರೆಜಿಲ್ನಂತಹ ರಾಷ್ಟ್ರಗಳಿಗೆ ಪ್ಯಾರಿಸ್, ನಿರ್ಬಂಧವನ್ನ ಮುಂದುವರಿಸಿದೆ.
ಅಮೆರಿಕ, ಬ್ರಿಟನ್ ಸೇರಿದಂತೆ ವಿಶ್ವದ ಬಹುತೇಕ ರಾಷ್ಟ್ರಗಳ ಲಸಿಕೆ ಪಡೆದ ಪ್ರಜೆಗಳು ಇನ್ಮೇಲೆ ಪ್ಯಾರಿಸ್ ಪ್ರವಾಸ ಮಾಡಬಹುದಾಗಿದೆ. ಪ್ರವಾಸಿಗರಿಗೆ ಕ್ವಾರಂಟೈನ್ ಅವಧಿಯಾಗಲಿ ಅಥವಾ ಪ್ಯಾರಿಸ್ಗೆ ಬಂದ ಕಾರಣವನ್ನ ತಿಳಿಸಬೇಕಾದ ಅವಶ್ಯಕತೆಯೂ ಇಲ್ಲ ಎಂದು ಪ್ರವಾಸೋದ್ಯಮ ಇಲಾಖೆ ಹೇಳಿದೆ.
ಪ್ಯಾರಿಸ್ಗೆ ಎಂಟ್ರಿ ಕೊಡುವ ಮುನ್ನ ಕೊರೊನಾ ನೆಗೆಟಿವ್ ವರದಿ ಹೊಂದಿರೋದು ಕಡ್ಡಾಯವಾಗಿದೆ. ಯುರೋಪ್ನಿಂದ ಆಗಮಿಸುವ ಲಸಿಕೆ ಪಡೆದ ಪ್ರವಾಸಿಗರು ಟೆಸ್ಟಿಂಗ್ ಮಾಡಿಸುವ ಅವಶ್ಯಕತೆಯೂ ಇರೋದಿಲ್ಲ.