ಮಕ್ಕಳು ಸಾಮಾನ್ಯವಾಗಿ ತಮ್ಮ ತಂದೆಯ ಸರ್ನೇಮ್ ಬಳಸುತ್ತಾರೆ. ಮದುವೆಯ ನಂತರ ಮಹಿಳೆ ತನ್ನ ಪತಿ ಸರ್ನೇಮ್ ಬಳಲಸು ಶುರು ಮಾಡ್ತಾಳೆ. ಅಡ್ಡ ಹೆಸರಿನ ವಿಷ್ಯಕ್ಕೆ ಗಲಾಟೆಗಳಾಗಿರುವ ಉದಾಹರಣೆಗಳಿವೆ. ಆದ್ರೆ ಫ್ರಾನ್ಸ್ ನಲ್ಲಿ ಮಕ್ಕಳಿಗೆ ಸರ್ನೇಮ್ ಆಯ್ಕೆ ಮಾಡಿಕೊಳ್ಳುವ ಸಂಪೂರ್ಣ ಅಧಿಕಾರ ನೀಡುವ ಬಗ್ಗೆ ಚರ್ಚೆ ನಡೆದಿದೆ.
ಸರ್ನೇಮ್ ವಿಷ್ಯಕ್ಕೆ ಸಂಬಂಧಿಸಿದಂತೆ ಸರ್ಕಾರ ಕಾನೂನು ತರಲು ಹೊರಟಿದೆ. ಈ ನಿಟ್ಟಿನಲ್ಲಿ ಪ್ರಸ್ತಾಪವನ್ನು ಪರಿಚಯಿಸಲಾಗಿದೆ ಎಂದು ಫ್ರೆಂಚ್ ಸಚಿವ ಎರಿಕ್ ಡುಪಾಂಡ್-ಮೊರೆಟ್ಟಿ ಹೇಳಿದ್ದಾರೆ. ಮಕ್ಕಳು 18 ವರ್ಷಕ್ಕೆ ಬಂದ ತಕ್ಷಣ ಯಾವುದೇ ತೊಂದರೆಯಿಲ್ಲದೆ ತಮ್ಮ ಸರ್ನೇಮ್ ಬದಲಾಯಿಸಬಹುದು.
ಹೆಸರು ಬದಲಾಯಿಸುವ ಮುನ್ನ ಯಾರೂ ಕಾರಣ ಹೇಳಬೇಕಿಲ್ಲ ಮುಂದಿನ ಕೆಲವು ದಿನಗಳಲ್ಲಿ ಈ ಪ್ರಸ್ತಾಪದ ಮೇಲೆ ಮತದಾನ ನಡೆಯಲಿದ್ದು, ಎಲ್ಲವೂ ನಿರೀಕ್ಷೆಯಂತೆ ನಡೆದರೆ ಅದು ಕಾನೂನಾಗಲಿದೆ ಎಂದು ಸಚಿವರು ಹೇಳಿದ್ದಾರೆ. ಫ್ರಾನ್ಸ್ ನಲ್ಲಿರುವ ಜನರು ತಮ್ಮ ಕುಟುಂಬದ ಹೆಸರನ್ನು ಬದಲಾಯಿಸಲು ಈಗಾಗಲೇ ಸ್ವಾತಂತ್ರ್ಯವನ್ನು ಹೊಂದಿದ್ದರೂ, ಅದರ ಪ್ರಕ್ರಿಯೆ ಸಾಕಷ್ಟು ಜಟಿಲವಾಗಿತ್ತು. ಹೆಸರು ಬದಲಿಸಲು ಕಾರಣವನ್ನು ನೀಡಬೇಕಾಗಿತ್ತು. ಹೊಸ ಕಾನೂನಿನ ನಂತ್ರ ಜನರು ತಂದೆ ಅಥವಾ ತಾಯಿ ಇಬ್ಬರಲ್ಲಿ ಒಬ್ಬರ ಸರ್ ನೇಮ್ ಇಟ್ಟುಕೊಳ್ಳಲು ಸ್ವಾತಂತ್ರರಾಗಿರುತ್ತಾರೆ.