alex Certify ಒಂದೇ ದಿನದಲ್ಲಿ ಒಂದು ಲಕ್ಷ ಕೊರೋನಾ ಕೇಸ್, ಫ್ರಾನ್ಸ್ ನಲ್ಲಿ ಟಫ್ ರೂಲ್ಸ್ ಜಾರಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಒಂದೇ ದಿನದಲ್ಲಿ ಒಂದು ಲಕ್ಷ ಕೊರೋನಾ ಕೇಸ್, ಫ್ರಾನ್ಸ್ ನಲ್ಲಿ ಟಫ್ ರೂಲ್ಸ್ ಜಾರಿ

ಫ್ರಾನ್ಸ್ ನಲ್ಲಿ ಕೋವಿಡ್ ಸೋಂಕು ದಿನೇದಿನೇ ಹೆಚ್ಚಾಗುತ್ತಿದೆ. ಕಳೆದ ಮೂರು ದಿನಗಳಿಂದಲೂ ಸಾವಿರಾರು ಸಂಖ್ಯೆಯಲ್ಲಿ ಕೋವಿಡ್ ಪ್ರಕರಣಗಳು ಪತ್ತೆಯಾಗುತ್ತಿವೆ. ಕಳೆದ ಇಪ್ಪತ್ನಾಲ್ಕು ಗಂಟೆಯಲ್ಲಿ 104,611 ಜನ ಕೊರೋನಾ ಪಾಸಿಟಿವ್ ಆಗಿದ್ದಾರೆ.

ಫ್ರಾನ್ಸ್‌ನ ಸಾರ್ವಜನಿಕ ಆರೋಗ್ಯ ಏಜೆನ್ಸಿಯ ಇತ್ತೀಚಿನ ಅಂಕಿಅಂಶಗಳಿಂದ ಈ ಮಾಹಿತಿ ತಿಳಿದು ಬಂದಿದೆ. ಪರಿಸ್ಥಿತಿಯನ್ನ ಗಂಭೀರವಾಗಿ ಪರಿಗಣಿಸಿರುವ ಫ್ರಾನ್ಸ್ ನ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಮತ್ತು ಅವರ ಸರ್ಕಾರದ ಪ್ರಮುಖ ಸದಸ್ಯರು ವಿಡಿಯೋ ಕಾನ್ಫರೆನ್ಸ್ ಸಭೆಯಲ್ಲಿ ಪರಿಸ್ಥಿತಿ ನಿಭಾಯಿಸಲು ತೆಗೆದುಕೊಳ್ಳಬಹುದಾದ ಕೋವಿಡ್ ಸುರಕ್ಷತಾ ಕ್ರಮಗಳನ್ನು ಚರ್ಚಿಸಿದ್ದಾರೆ.

ಈ ಸಂದರ್ಭದಲ್ಲಿ ಲಸಿಕೆಯೊಂದೆ ಪರಿಹಾರ ಎಂಬ ನಿರ್ಧಾರಕ್ಕೆ ಬಂದಿರುವ ಫ್ರಾನ್ಸ್ ಸರ್ಕಾರ ವಯಸ್ಕರಿಗೆ ಬೂಸ್ಟರ್ ಡೋಸ್ ನೀಡಲು ಮುಂದಾಗಿದೆ. ಸಂಪೂರ್ಣ ವ್ಯಾಕ್ಸಿನೇಷನ್ ಆದ ಮೂರು ತಿಂಗಳ ನಂತರ ಬೂಸ್ಟರ್ ಡೋಸ್ ಪಡೆಯಬೇಕೆಂಬ ಆದೇಶ ಹೊರಡಿಸಿರುವ ಫ್ರಾನ್ಸ್ ಸರ್ಕಾರ, ಬೂಸ್ಟರ್ ಡೋಸ್ ಪಡೆಯದವರ ಆರೋಗ್ಯ ಪಾಸ್ ಅಮಾನ್ಯ ಮಾಡುವ ಎಚ್ಚರಿಕೆ ನೀಡಿದೆ. ಕೆಫೆಗಳು, ರೆಸ್ಟೋರೆಂಟ್‌ಗಳು ಮತ್ತು ಸಾರ್ವಜನಿಕ ಸ್ಥಳಗಳಿಗೆ ಪ್ರವೇಶಕ್ಕಾಗಿ, ಹಾಗೆಯೇ ಅಂತರರಾಷ್ಟ್ರೀಯ ಪ್ರಯಾಣಕ್ಕಾಗಿ ಪಾಸ್ ಅಗತ್ಯವಿದೆ ಎಂಬುವುದನ್ನ ಗಮನಿಸಬೇಕು.

ಸರ್ಕಾರ ಮಾತ್ರವಲ್ಲ ಅಲ್ಲಿನ ಸ್ಥಳೀಯ ಅಧಿಕಾರಿಗಳು ಕೊರೋನಾ ನಿಯಂತ್ರಣಕ್ಕೆ ತಮ್ಮದೇ ಆದ ಸುರಕ್ಷತಾ ಕ್ರಮಗಳನ್ನು ಜಾರಿಗೊಳಿಸಿದ್ದಾರೆ. ಕಳೆದ ತಿಂಗಳ ಕೊನೆಯಲ್ಲಿ, ಸವೊಯಿಯ ಅಧಿಕಾರಿಗಳು ಒಳಾಂಗಣ ಸಾರ್ವಜನಿಕ ಸ್ಥಳಗಳಲ್ಲಿ ಮಾತ್ರವಲ್ಲದೆ ಹೊರಾಂಗಣದಲ್ಲಿಯೂ ಕಡ್ಡಾಯವಾಗಿ ಮುಖವಾಡಗಳನ್ನು ಧರಿಸುವುದನ್ನು ಮರುಪರಿಚಯಿಸಿದರು.‌

ಈ ಕ್ರಮವನ್ನು ನೆರೆಯ ಇಟಲಿಯು ಅನುಸರಿಸಿದೆ. ತಿಂಗಳ ಆರಂಭದಿಂದ, ಕೊರೋನಾ‌ ಕೇಸ್ ಗಳಲ್ಲಿ ಗಣನೀಯ ಏರಿಕೆಯಾಗಿದೆ. ಸ್ಥಿರವಾಗಿ ಏರಿಕೆಯಾಗ್ತಿದ್ದ ಪ್ರಕರಣಗಳು ಡಿಸೆಂಬರ್ 4ರಂದು 50,000 ಗಡಿ ದಾಟಿತು. ಇಲ್ಲಿಯವರೆಗೆ, ಕೊರೋನ ವೈರಸ್ನಿಂದ ಫ್ರಾನ್ಸ್ ನಲ್ಲಿ 122,546 ಸಾವು ಉಂಟಾಗಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...