ಫ್ರೆಂಚ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರೋನ್ ಅವರು ಗೇಬ್ರಿಯಲ್ ಅಟ್ಟಲ್ (34) ಅವರನ್ನು ದೇಶದ ಹೊಸ ಪ್ರಧಾನಿಯಾಗಿ ನೇಮಕ ಮಾಡಿದ್ದಾರೆ.
ಅಟ್ಟಾಲ್ ಅತ್ಯಂತ ಕಿರಿಯ ಫ್ರೆಂಚ್ ಪ್ರಧಾನಿ ಮತ್ತು ಈ ಹುದ್ದೆಯನ್ನು ಅಲಂಕರಿಸಿದ ಮೊದಲ ಸಲಿಂಗಕಾಮಿ ವ್ಯಕ್ತಿಯಾಗಿದ್ದಾರೆ. ಅತ್ಯಂತ ಕಿರಿಯ, ಮೊದಲ ಸಲಿಂಗಕಾಮಿ ಪಿಎಂ ಎಂಬ ಹೆಗ್ಗಳಿಕೆ ಪಡೆದಿದ್ದಾರೆ.
ನಿನ್ನೆ ರಾಜೀನಾಮೆ ನೀಡಿದ ಮಾಜಿ ಪ್ರಧಾನಿ ಎಲಿಜಬೆತ್ ಬೋರ್ನ್ ಅವರ ಉತ್ತರಾಧಿಕಾರಿಯಾಗಿ ಅಟಲ್ ಅಧಿಕಾರ ವಹಿಸಿಕೊಳ್ಳಲಿದ್ದಾರೆ. ಮಾಜಿ ಪ್ರಧಾನಿ ಎಲಿಜಬೆತ್ ಬೋರ್ನ್ (62) ಎರಡು ವರ್ಷಗಳಿಗಿಂತ ಕಡಿಮೆ ಸೇವೆ ಸಲ್ಲಿಸಿದ ನಂತರ ಸೋಮವಾರ ತಮ್ಮ ಹುದ್ದೆಯಿಂದ ಕೆಳಗಿಳಿದರು.