ನವದೆಹಲಿ: ಐಫೋನ್ ತಯಾರಿಕೆಯಲ್ಲಿ ದೈತ್ಯ ಕಂಪನಿ ಆಗಿರುವ ಚೀನಾದ ಫಾಕ್ಸ್ ಕಾನ್ ಕಂಪನಿಯು ಕರ್ನಾಟಕದ ತನ್ನ ಫಾಕ್ಸ್ ಕಾನ್ ಹಾನ್ ಹೈಟೆಕ್ನಾಲಜಿ ಇಂಡಿಯಾ ಮೆಗಾ ಡೆವಲಪ್ಮೆಂಟ್ ಪ್ರೈವೇಟ್ ಲಿಮಿಟೆಡ್ ನಲ್ಲಿ ಸುಮಾರು 1,200 ಕೋಟಿ ರೂಪಾಯಿ ಹೂಡಿಕೆ ಮಾಡಿದೆ.
ಫಾಕ್ಸ್ ಕಾನ್ ಕಂಪನಿಯ ಷೇರುಪೇಟೆಗೆ ನೀಡಿರುವ ಮಾಹಿತಿಯಲ್ಲಿ ಈ ವಿಷಯ ತಿಳಿಸಿದೆ. ಆ. 21ರಂದು ಫಾಕ್ಸ್ ಕಾನ್ ಹಾನ್ ಹೈಟೆಕ್ನಾಲಜಿ ಇಂಡಿಯಾ ಮೆಗಾ ಡೆವಲಪ್ಮೆಂಟ್ ಪ್ರೈವೇಟ್ ಲಿಮಿಟೆಡ್ ನ 120 ಕೋಟಿ ಷೇರುಗಳನ್ನು ಪ್ರತಿ ಷೇರಿಗೆ 10 ರೂಪಾಯಿ ಮುಖಬೆಲೆಯಲ್ಲಿ ಫಾಕ್ಸ್ ಕಾನ್ ಖರೀದಿಸಿದೆ.
ದೊಡ್ಡಬಳ್ಳಾಪುರ ಸಮೀಪ ಬೃಹತ್ ಐಫೋನ್ ತಯಾರಿಕಾ ಘಟಕ ಸ್ಥಾಪಿಸಲು 25,000 ಕೋಟಿ ರೂಪಾಯಿ ಹೂಡಿಕೆ ಮಾಡಲು ಫಾಕ್ಸ್ ಕಾನ್ ಯೋಜಿಸಿದೆ. ಈ ಘಟಕದಿಂದ 40,000 ಉದ್ಯೋಗಗಳ ಸೃಷ್ಟಿಯಾಗುವ ನಿರೀಕ್ಷೆ ಇದೆ. ಕರ್ನಾಟಕದಲ್ಲಿ ನಾವು ಸ್ಥಾಪಿಸಲು ಉದ್ದೇಶಿಸಿರುವ ಘಟಕ ಎರಡನೇ ದೊಡ್ಡ ಫಾಕ್ಸ್ ಕಾನ್ ಪ್ಲಾಂಟ್ ಆಗಿದೆ. ಚೀನಾದಲ್ಲಿ ಸ್ಥಾಪಿಸಿರುವ ಘಟಕ ಮೊದಲ ಸ್ಥಾನದಲ್ಲಿದೆ ಎಂದು ಫಾಕ್ಸ್ ಕಾನ್ ಅಧ್ಯಕ್ಷ ಯಂಗ್ ಲಿಯು ತಿಳಿಸಿದ್ದಾರೆ.