ದುಷ್ಟ ಶಕ್ತಿ ದೂರ ಓಡಿಸುವುದಾಗಿ ವಿವಿಧ ಪೂಜೆ ನಡೆಸಿದ್ದ ತಂದೆ, ನಾಲ್ಕು ವರ್ಷದ ತನ್ನ ಮಗುವಿನ ಬಾಯಿಗೆ ಕುಂಕುಮ ಹಾಕಿ, ಅದರ ಸಾವಿಗೆ ತಾನೆ ಕಾರಣನಾದ ಘಟನೆ ಆಂಧ್ರದ ನೆಲ್ಲೂರಿನಲ್ಲಿ ನಡೆದಿದೆ.
ಮಗಳ ಬಾಯಿಗೆ ಕುಂಕುಮದ ಪುಡಿ ಎರಚಿದಾಗ ಮಗು ಉಸಿರುಗಟ್ಟಿಸಿದೆ. ಆಕೆಯ ಕೂಗಾಟದಿಂದ ಅಕ್ಕಪಕ್ಕದ ಮನೆಯವರು ಎಚ್ಚೆತ್ತಿದ್ದು, ಪ್ರಜ್ಞೆ ತಪ್ಪಿದ ಮಗುವನ್ನು ಸಮೀಪದ ಆಸ್ಪತ್ರೆಗೆ ಸಾಗಿಸಿದ್ದಾರೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವೇಳೆ ಆಕೆ ಮೃತಪಟ್ಟಿದ್ದಾಳೆ.
ಕುಟುಂಬಕ್ಕೆ ಒಂದೇ ಟಿಕೆಟ್ ನಮಗೆ ಅನ್ವಯಿಸಲ್ಲ, ನಾನು ಕೇಳಿದ್ರೆ 4 ಟಿಕೆಟ್ ಕೊಡ್ತಾರೆ
ಅವಳಿ ಹೆಣ್ಣು ಮಕ್ಕಳನ್ನು ಹೊಂದಿರುವ ವೇಣುಗೋಪಾಲ್ ಪೆರಾರೆಡ್ಡಿಪಲ್ಲಿ ಗ್ರಾಮದ ತಮ್ಮ ಮನೆಯಲ್ಲಿ ವ್ಯವಹಾರದಲ್ಲಿ ನಷ್ಟ ಎಂದು ಕೆಲವು ವಿಧಿವಿಧಾನಗಳನ್ನು ನಡೆಸಿದ್ದನು. ಕೊನೆಯಲ್ಲಿ ತನ್ನ ಮಗಳು ಪುನರ್ವಿಕಾ ಬಾಯಿಗೆ ಕುಂಕುಮದ ಪುಡಿಯನ್ನು ತುಂಬಿದ್ದಾನೆ. ಇದು ಮಗುವಿನ ಉಸಿರುಗಟ್ಟುವಿಕೆಗೆ ಕಾರಣವಾಯಿತು, ನಂತರ ಆಕೆ ಸಾವನ್ನಪ್ಪಿದ್ದಾಳೆ.