ಅಪರಿಚಿತ ಬಂದೂಕುಧಾರಿಗಳಿಂದ ಕಳೆದೊಂದು ವಾರದಲ್ಲಿ ಭಾರತಕ್ಕೆ ಬೇಕಾಗಿದ್ದು ಪಾಕಿಸ್ತಾನದಲ್ಲಿ ಆಶ್ರಯ ಪಡೆದಿರುವ 4 ಭಯೋತ್ಪಾದಕರು ಹತ್ಯೆಯಾಗಿದ್ದಾರೆ. ಇದರಿಂದ ಪಾಕ್ ನಲ್ಲಿ ಆಶ್ರಯ ಪಡೆದಿರುವ ಭಯೋತ್ಪಾದಕರಲ್ಲಿ ನಡುಕ ಶುರುವಾಗಿದೆ.
ಸೈಯದ್ ನೂರ್ ಶಲೋಬರ್, ಸೈಯದ್ ಖಾಲಿದ್ ರಜಾ, ಐಜಾಜ್ ಅಹ್ಮದ್ ಅಹಂಗರ್ ಅಲಿಯಾಸ್ ಅಬು ಉಸ್ಮಾನ್ ಅಲ್-ಕಾಶ್ಮೀರಿ ಮತ್ತು ಬಶೀರ್ ಅಹ್ಮದ್ ಪೀರ್ ಅಲಿಯಾಸ್ ಇಮ್ತಿಯಾಜ್ ಆಲಂ ಎಂಬ ಉಗ್ರರು ತ್ಯೆಯಾಗಿದ್ದಾರೆ. .
ಪಾಕಿಸ್ತಾನದ ಖೈಬರ್ ಪಖ್ತುಂಖ್ವಾ ಪ್ರದೇಶದಲ್ಲಿ ನಿನ್ನೆ ಅಪರಿಚಿತ ಬಂದೂಕುಧಾರಿಗಳಿಂದ ಸೈಯದ್ ನೂರ್ ಶಲೋಬರ್ ಹತ್ಯೆ ಯಾಗಿದೆ. ಕಾಶ್ಮೀರದಲ್ಲಿ ಭಯೋತ್ಪಾದನೆಯನ್ನು ಹರಡಲು ಸೈಯರ್ ನೂರ್ ಶಲೋಬರ್ ಕಾರಣನಾಗಿದ್ದನು ಮತ್ತು ಪಾಕಿಸ್ತಾನದ ಸೇನೆ ಮತ್ತು ISI ಯೊಂದಿಗೆ ನಿಕಟವಾಗಿ ಕಾರ್ಯನಿರ್ವಹಿಸುತ್ತಿದ್ದನು ಎಂದು ವರದಿಯಾಗಿದೆ. ಕಾಶ್ಮೀರ ಕಣಿವೆಯಿಂದ ಭಯೋತ್ಪಾದಕರ ನೇಮಕಾತಿಗೆ ಆತ ಕಾರಣನಾಗಿದ್ದ.
ಸೋಮವಾರ ಮತ್ತೋರ್ವ ಭಯೋತ್ಪಾದಕ ಕಮಾಂಡರ್ ಸೈಯದ್ ಖಾಲಿದ್ ರಜಾ ಪಾಕಿಸ್ತಾನದ ಕರಾಚಿಯಲ್ಲಿ ಹತನಾದ. ಅಪರಿಚಿತ ದುಷ್ಕರ್ಮಿಗಳು ಆತನ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ. ವರದಿಗಳ ಪ್ರಕಾರ ಸೈಯದ್ ಖಾಲಿದ್ ಕಾಶ್ಮೀರದಲ್ಲಿ ಕಾರ್ಯಾಚರಿಸುತ್ತಿರುವ ಭಯೋತ್ಪಾದಕರೊಂದಿಗೆ ಸಂಬಂಧ ಹೊಂದಿದ್ದ. ಸಿಂಧುದೇಶ್ ರೆವಲ್ಯೂಷನರಿ ಆರ್ಮಿ (ಎಸ್ಆರ್ಎ) ಖಾಲಿದ್ ರಜಾ ಹತ್ಯೆಯ ಹೊಣೆ ಹೊತ್ತುಕೊಂಡಿದೆ.