ಸೂರತ್: ಗುಜರಾತ್ ನ ಸೂರತ್ ಜಿಲ್ಲೆಯ ಪಲ್ಸಾನ -ಕಡೋದರ ರಸ್ತೆಯ ಬಲೇಶ್ವರ್ ಗ್ರಾಮದಲ್ಲಿ ಟ್ಯಾಂಕ್ ಸ್ವಚ್ಛಗೊಳಿಸುವಾಗ ನಾಲ್ವರು ಕಾರ್ಮಿಕರು ಉಸಿರುಗಟ್ಟಿ ಸಾವನ್ನಪ್ಪಿದ್ದಾರೆ.
ಕಿರಣ್ ಇಂಡಸ್ಟ್ರೀಸ್ ಮಿಲ್ನಲ್ಲಿ ಘಟನೆ ನಡೆದಿದೆ. ಸ್ವಚ್ಛಗೊಳಿಸಲು ಟ್ಯಾಂಕ್ ಒಳಗೆ ಇಳಿದಾಗ ಆಮ್ಲಜನಕ ಕೊರತೆ ಉಂಟಾಗಿ ಉಸಿರುಗಟ್ಟಿ ಕಾರ್ಮಿಕರು ಸಾವನ್ನಪ್ಪಿದ್ದಾರೆ. ಮಾಹಿತಿ ತಿಳಿದ ಬಾರ್ಡೋಲಿ ಅಗ್ನಿಶಾಮಕ ದಳ ಸಿಬ್ಬಂದಿ ಹಾಗೂ ಪೊಲೀಸರು ರಕ್ಷಣೆಗೆ ಮುಂದಾಗಿದ್ದಾರೆ.
ಟ್ಯಾಂಕ್ ಒಳಗೆ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ನಾಲ್ವರನ್ನು ಮೇಲಕ್ಕೆತ್ತಿ ಆಸ್ಪತ್ರೆಗೆ ಸಾಗಿಸಲಾಗಿದ್ದು, ಈ ವೇಳೆಗೆ ಅವರು ಆಮ್ಲಜನಕ ಕೊರತೆಯಿಂದ ಮೃತಪಟ್ಟಿದ್ದರೆನ್ನಲಾಗಿದೆ.