ಗುಜರಾತ್ ಮೂಲದ ಗ್ರೇಟಾ ಎಲೆಕ್ಟ್ರಿಕ್ ಸ್ಕೂಟರ್ಸ್ ಭಾರತದಲ್ಲಿ ನಾಲ್ಕು ಹೊಸ ಇವಿ ಸ್ಕೂಟರ್‌ಗಳನ್ನು ಬಿಡುಗಡೆ ಮಾಡಿದೆ.
ದಿನೇ ದಿನೇ ಬೆಳೆಯುತ್ತಿರುವ ಇವಿ ಸ್ಕೂಟರ್ ಮಾರುಕಟ್ಟೆಗೆ ಲೇಟೆಸ್ಟ್ ಆಗಿ ಕಾಲಿಟ್ಟಿರುವ ಗ್ರೇಟಾ; ಹಾರ್ಪರ್, ಎವೆಸ್ಪಾ, ಗ್ಲೈಡ್ ಮತ್ತು ಹಾರ್ಪರ್ ಜ಼ಡ್‌ಎಕ್ಸ್ ಹೆಸರಿನಲ್ಲಿ ಈ ನಾಲ್ಕು ಸ್ಕೂಟರ್ ಗಳನ್ನು ಬಿಡುಗಡೆ ಮಾಡಿದ್ದು, ಇವುಗಳ ಬೆಲೆಯು 60,000 ರೂ.ಗಳಿಂದ 92,000 ರೂ.ಗಳ ನಡುವೆ ಇದೆ.
ಅಂತಾರಾಷ್ಟ್ರೀಯ ಆಟೋಮೊಟಿವ್ ತಂತ್ರಜ್ಞಾನ ಕೇಂದ್ರ (ಐಸಿಎಟಿ) 2019 ರಲ್ಲಿ ಈ ನಾಲ್ಕು ಸ್ಕೂಟರ್‌ಗಳಿಗೆ ಅನುಮೋದನೆ ಕೊಟ್ಟಿರುವುದಾಗಿ ಕಂಪನಿ ತಿಳಿಸಿದೆ. ಕೋವಿಡ್ ಕಾರಣದಿಂದಾಗಿ ತನ್ನ ಸ್ಕೂಟರ್ ಗಳ ಬಿಡುಗಡೆ ತಡವಾಗಿದೆ ಎಂದು ಗ್ರೇಟಾ ತಿಳಿಸಿದೆ.
48-60 ವೋಲ್ಟ್‌ನ ಲಿಥಿಯಂ-ಐಯಾನ್ ಬ್ಯಾಟರಿ ಬಳಸುವ ಈ ನಾಲ್ಕು ಸ್ಕೂಟರ್‌ಗಳು, ನಾಲ್ಕು ರೀತಿಯ ಬ್ಯಾಟರಿಗಳ ಕಾಂಪೋಸಿಷನ್‌ನಲ್ಲಿ ಸಿಗುತ್ತವೆ. ಪ್ರತಿ ಚಾರ್ಜ್‌ಗೆ 70-100 ಕಿಮೀಗಳ ಚಾಲನಾ ವ್ಯಾಪ್ತಿಯನ್ನು ಈ ಸ್ಕೂಟರ್‌ಗಳು ಹೊಂದಿವೆ. ಬ್ಯಾಟರಿಯನ್ನು ಸಂಪೂರ್ಣವಾಗಿ ಚಾರ್ಜ್ ಮಾಡಲು ನಾಲ್ಕು ಗಂಟೆಗಳವರೆಗೂ ಬೇಕಾಗುತ್ತದೆ.
ಡ್ರಂ ಡಿಸ್ಕ್ ಬ್ರೇಕ್ ಗಳು, ಡಿಸ್ಕ್ ಹೈಡ್ರಾಲಿಕ್ ಬ್ರೇಕ್‌ಗಳು (ಗ್ಲೈಡ್‌ಗೆ ಮಾತ್ರ) ಇರುವ ಈ ಸ್ಕೂಟರ್‌ಗಳಲ್ಲಿ ಕೀ ರಹಿತ ಸ್ಟಾರ್ಟ್, ಸ್ಮಾರ್ಟ್ ಶಿಫ್ಟ್, ಡಿಜಿಟಲ್ ಇನ್ಸ್‌ಸ್ಟ್ರುಮೆಂಟ್ ಕ್ಲಸ್ಟರ್ ಡಿಸ್ಪ್ಲೇ, ರಿವರ್ಸ್ ಮೋಡ್, ಎಟಿಎ ವ್ಯವಸ್ಥೆ ಹಾಗೂ ಕಳ್ಳತನ ನಿರೋಧಕ ಅಲಾರ್ಮ್‌ಗಳಂಥ ಆಕರ್ಷಕ ಫೀಚರ್‌ಗಳು ಇವೆ.