ಮುಂಬೈ: ಮುಂಬೈ ಕರಾವಳಿಯಲ್ಲಿ ಒಎನ್‌ಜಿಸಿ ಹೆಲಿಕಾಪ್ಟರ್ ತುರ್ತು ಭೂಸ್ಪರ್ಶವಾಗಿದ್ದು, ನಾಲ್ವರು ಸಾವನ್ನಪ್ಪಿದ್ದಾರೆ.
ತೈಲ ಮತ್ತು ನೈಸರ್ಗಿಕ ಅನಿಲ ನಿಗಮಕ್ಕೆ(ONGC) ಸೇರಿದ ಹೆಲಿಕಾಪ್ಟರ್ ಮಂಗಳವಾರ ಬೆಳಗ್ಗೆ ಮುಂಬೈನ ಪಶ್ಚಿಮಕ್ಕೆ 60 ನಾಟಿಕಲ್ ಮೈಲಿ ದೂರದಲ್ಲಿರುವ ಬಾಂಬೆ ಹೈ ನಲ್ಲಿರುವ ಸಾಗರ್ ಕಿರಣ್ ತೈಲ ರಿಗ್ ಬಳಿ ಸಮುದ್ರದಲ್ಲಿ ನಿಯಂತ್ರಿತ ತುರ್ತು ಭೂಸ್ಪರ್ಶ ಮಾಡಿದ ನಂತರ ನಾಲ್ವರು ಸಾವನ್ನಪ್ಪಿದ್ದಾರೆ.
ಭಾರತೀಯ ಕೋಸ್ಟ್ ಗಾರ್ಡ್ ಮತ್ತು ಭಾರತೀಯ ನೌಕಾಪಡೆಯ ಹಡಗುಗಳು, ಹೆಲಿಕಾಪ್ಟರ್ ಗಳನ್ನು ಒಳಗೊಂಡ ಕಾರ್ಯಾಚರಣೆಯಲ್ಲಿ ಇಬ್ಬರು ಪೈಲಟ್ ಗಳು, ಆರು ಒಎನ್‌ಜಿಸಿ ಉದ್ಯೋಗಿಗಳು ಮತ್ತು ಸಾರ್ವಜನಿಕ ವಲಯದ ತೈಲ ಗುತ್ತಿಗೆದಾರರ ಒಬ್ಬ ಉದ್ಯೋಗಿಯನ್ನು ಸುರಕ್ಷಿತವಾಗಿ ರಕ್ಷಿಸಲಾಯಿತು. ಮೃತರನ್ನು ಮುಕೇಶ್ ಪಟೇಲ್, ವಿಜಯ್ ಮಂಡ್ಲೋಯ್, ಸತ್ಯಂಬಾದ್ ಪಾತ್ರ ಮತ್ತು ಸಂಜು ಫ್ರಾನ್ಸಿಸ್ ಎಂದು ಗುರುತಿಸಲಾಗಿದೆ.