ರಾಜ್ಯದಲ್ಲಿ ಕಳವಳ ಸೃಷ್ಟಿಸಿದ್ದ ಸೋಲದೇವನಹಳ್ಳಿ ಮಕ್ಕಳ ನಾಪತ್ತೆ ಪ್ರಕರಣ ಕೊನೆಗೂ ಸುಖಾಂತ್ಯ ಕಂಡಿದೆ. ಸೋಲದೇವನಹಳ್ಳಿ ಅಪಾರ್ಟ್ಮೆಂಟ್ನಿಂದ ನಾಪತ್ತೆಯಾಗಿದ್ದ ಮಕ್ಕಳಲ್ಲಿ ಮೂವರು ನಿನ್ನೆ ಬೆಂಗಳೂರಿನಲ್ಲಿಯೇ ಪತ್ತೆಯಾಗಿದ್ದರು, ಇದೀಗ ಉಳಿದ ನಾಲ್ವರು ಮಕ್ಕಳು ಮಂಗಳೂರಿನಲ್ಲಿ ಪತ್ತೆಯಾಗಿದ್ದಾರೆ. ಈ ಮೂಲಕ ನಾಪತ್ತೆಯಾಗಿದ್ದ ಎಲ್ಲಾ ಮಕ್ಕಳು ಪತ್ತೆಯಾದಂತಾಗಿದ್ದು ಪೋಷಕರು ನಿಟ್ಟುಸಿರು ಬಿಟ್ಟಿದ್ದಾರೆ.
ಪೋಷಕರು ಓದಲು ಹೇಳುತ್ತಾರೆ ಎಂಬ ಕಾರಣಕ್ಕೆ ಈ ಮಕ್ಕಳು ಮನೆಯನ್ನು ಬಿಟ್ಟಿದ್ದರು. ಓದಲು ಇಷ್ಟವಿಲ್ಲ. ಆಟವಾಡುತ್ತಲೇ ಸಾಧನೆ ಮಾಡುತ್ತೇವೆ ಎಂದು ಈ ಮಕ್ಕಳು ಮನೆಯಿಂದ ಕಣ್ಮರೆಯಾಗಿದ್ದರು. ಈ ಮಕ್ಕಳು ಮೊದಲು ಬೆಳಗಾವಿಗೆ ತೆರಳಿದ್ದರು. ಬಳಿಕ ಅಲ್ಲಿಂದ ಮೈಸೂರಿಗೆ ಹೋಗಿದ್ದರು. ಅದಾದ ಬಳಿಕ ಮತ್ತೆ ಬೆಂಗಳೂರಿಗೆ ವಾಪಸ್ಸಾಗಿದ್ದರು. ಈ ವೇಳೆಯಲ್ಲಿ ನಿನ್ನೆ ಮೂವರು ಮಕ್ಕಳನ್ನು ಪೊಲೀಸರು ಪತ್ತೆ ಮಾಡಿದ್ದರು.
ಸಕಲ ಸಮೃದ್ಧಿ ಪ್ರಾಪ್ತಿಗಾಗಿ ನವರಾತ್ರಿಯಲ್ಲಿ ಪೂಜಿಸಿ ದುರ್ಗಾ ಮಾತೆಯ ಒಂಬತ್ತು ರೂಪ…!
ಆದರೆ ಉಳಿದ ನಾಲ್ವರು ಮಕ್ಕಳು ಮಂಗಳೂರಿಗೆ ಪ್ರಯಾಣ ಬೆಳೆಸಿದ್ದಾರೆ. ಅತ್ತಾವರ ಕೆಎಂಸಿ ಬಳಿ ಆಟೋವೇರಿದ್ದ ವೇಳೆ ವಿಳಾಸವನ್ನು ಹೇಳಲು ಮಕ್ಕಳು ಗೊಂದಲಕ್ಕೀಡಾಗಿದ್ದನ್ನು ಗಮನಿಸಿದ ಆಟೋ ಚಾಲಕ ಮಕ್ಕಳನ್ನು ಪಾಂಡೇಶ್ವರ ಪೊಲೀಸ್ ಠಾಣೆಗೆ ಕರೆದೊಯ್ದಿದ್ದಾರೆ. ಇಲ್ಲಿ ಮಕ್ಕಳು ಸೋಲದೇವನಹಳ್ಳಿಯವರು ಎಂಬ ವಿಚಾರ ಬೆಳಕಿಗೆ ಬಂದಿದೆ.
ಪೊಲೀಸರು ಮಕ್ಕಳ ವಿಚಾರಣೆ ನಡೆಸುತ್ತಿದ್ದು ಅವರ ಹೇಳಿಕೆಗಳನ್ನು ದಾಖಲಿಸಿಕೊಳ್ಳುತ್ತಿದ್ದಾರೆ. ನಾವೆಲ್ಲ ಬೆಸ್ಟ್ಫ್ರೆಂಡ್ಸ್. ಆದರೆ ಪೋಷಕರು ನಮ್ಮನ್ನು ದೂರ ಮಾಡಲು ಯತ್ನಿಸಿದ್ದರು. ಹೀಗಾಗಿ ನಾವು ಮನೆ ಬಿಟ್ಟು ಹೋಗಲು ನಿರ್ಧರಿಸಿದ್ದೆವು ಎಂದು ಮಕ್ಕಳು ಹೇಳಿದ್ದಾರೆ.