
ಉತ್ತರಕಾಂಡ್ ನ ಡೆಹ್ರಾಡೂನ್ ಜಿಲ್ಲೆಯಲ್ಲಿ ಸಂಭವಿಸಿದ ಭೀಕರ ಅಗ್ನಿ ಅವಘಡದಲ್ಲಿ ನಾಲ್ವರು ಮಕ್ಕಳು ಸುಟ್ಟು ಕರಕಲಾಗಿದ್ದಾರೆ. ಥಣಿ ಬ್ರಿಡ್ಜ್ ಸಮೀಪದ ಬಹು ಅಂತಸ್ತಿನ ಕಟ್ಟಡದ ಮನೆಯೊಂದರಲ್ಲಿ ಗುರುವಾರ ಸಂಜೆ ಈ ಅನಾಹುತ ಸಂಭವಿಸಿದೆ.
ಈ ಕಟ್ಟಡದಲ್ಲಿ ನಾಲ್ಕೈದು ಮನೆಗಳಿದ್ದು, ಗುರುವಾರ ಸಂಜೆ ನಾಲ್ಕು ಗಂಟೆ ಸುಮಾರಿಗೆ ವಿಕ್ಕಿ ಎಂಬವರ ಪತ್ನಿ ಕುಸುಮ ಎಲ್ಪಿಜಿ ಸಿಲಿಂಡರ್ ಬದಲಾಯಿಸಲು ಮುಂದಾಗಿದ್ದಾರೆ. ಈ ವೇಳೆ ಬೆಂಕಿ ಹತ್ತಿಕೊಂಡಿದ್ದು, ಕ್ಷಣಾರ್ಧದಲ್ಲಿ ಇಡೀ ಮನೆಗೆ ವ್ಯಾಪಿಸಿದೆ.
ಅಲ್ಲದೆ ಬೆಂಕಿಯ ತೀವ್ರತೆಗೆ ಮನೆಯಲ್ಲಿದ್ದ ಇತರೆ ಸಿಲಿಂಡರ್ ಗಳು ಸಹ ಸ್ಪೋಟಗೊಂಡಿದ್ದು, ಮತ್ತಷ್ಟು ಅನಾಹುತಕ್ಕೆ ಕಾರಣವಾಗಿದೆ. ಬೆಂಕಿ ನಂದಿಸಲು ಸ್ಥಳಕ್ಕೆ ಅಗ್ನಿಶಾಮಕ ಆಗಮಿಸಿತಾದರೂ ಅದರಲ್ಲಿದ್ದ ನೀರು ಸಹ ಖಾಲಿಯಾಗಿದೆ. ಹೆಚ್ಚಿನ ಅಗ್ನಿಶಾಮಕ ಪಡೆ ಬರುವಷ್ಟರಲ್ಲಿ ನಾಲ್ವರು ಮಕ್ಕಳು ಸ್ಥಳದಲ್ಲಿಯೇ ಸುಟ್ಟು ಕರಕಲಾಗಿದ್ದಾರೆ.