ಪಂಜಾಬ್ ನ ಜಲಂಧರ್ ನಗರದಲ್ಲಿ 20ರ ಹರೆಯದ ನಾಲ್ವರು ಯುವತಿಯರು ವಿಳಾಸ ಕೇಳುವ ನೆಪದಲ್ಲಿ ಚರ್ಮದ ಕಾರ್ಖಾನೆಯೊಂದರಲ್ಲಿ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದ ವ್ಯಕ್ತಿಯನ್ನು ಅಪಹರಿಸಿ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಲಾಗಿದೆ.
ಯುವತಿಯರು ವಿಳಾಸ ಕೇಳುವ ನೆಪದಲ್ಲಿ ತನಗೆ ಪ್ರಜ್ಞೆ ತಪ್ಪಿಸಿ ಅಪಹರಿಸಿದ್ದಾರೆ. ಕಣ್ಣಿಗೆ ಕೆಮಿಕಲ್ ಎರಚಿದ ನಂತರ ಬಿಳಿ ಬಣ್ಣದ ಕಾರಿನಲ್ಲಿ ಅಪಹರಿಸಲಾಗಿದೆ ಎಂದು ಅವರು ಹೇಳಿದ್ದಾರೆ. ಬಳಿಕ ತಡರಾತ್ರಿ ಏಕಾಂತ ಸ್ಥಳದಲ್ಲಿ ಬಿಸಾಡಿದ್ದರು. ಅಪರಾಧದ ಬಗ್ಗೆ ಪೊಲೀಸರಿಗೆ ದೂರು ನೀಡಿಲ್ಲ ಎಂದು ವ್ಯಕ್ತಿ ಹೇಳಿದ್ದಾರೆ. ಹಿರಿಯ ಪೊಲೀಸ್ ಅಧಿಕಾರಿಗಳು ಲೈಂಗಿಕ ಕಿರುಕುಳಕ್ಕೆ ಒಳಗಾಗಿದ್ದರೆ, ಪೊಲೀಸರಿಗೆ ದೂರು ನೀಡಬೇಕು ಎಂದು ಹೇಳಿದ್ದಾರೆ.
ಸಂತ್ರಸ್ತ ತನ್ನ ಪತ್ನಿ ದೂರು ದಾಖಲಿಸದಂತೆ ಕೇಳಿಕೊಂಡಿದ್ದಾಳೆ ಎಂದು ಹೇಳಿಕೊಂಡಿದ್ದಾನೆ. ಕಾರಿನಲ್ಲಿ ಬಂದ ನಾಲ್ವರು ಲೈಂಗಿಕ ದೌರ್ಜನ್ಯವೆಸಗಲು ಅಪಹರಣ ಮಾಡಿದ್ದಾರೆ ಎಂದು ಅವರು ಆರೋಪಿಸಿದ್ದಾನೆ.
ಕಾರ್ ನಿಂತಾಗ ಒಬ್ಬಳು ಹುಡುಗಿ ಚೀಟಿಯಲ್ಲಿ ಬರೆದಿದ್ದ ವಿಳಾಸ ಕೇಳಿದಳು. ಅವನು ವಿಳಾಸವನ್ನು ಓದುತ್ತಿದ್ದಾಗ, ಅವರಲ್ಲಿ ಒಬ್ಬರು ಅವನ ಕಣ್ಣಿಗೆ ಏನನ್ನೋ ಸಿಂಪಡಿಸಿದ್ದು, ಕಣ್ಣು ಕಾಣದಂತಾದಾಗ ಆತನನ್ನು ಅಪಹರಿಸಿ ಏಕಾಂತ ಸ್ಥಳಕ್ಕೆ ಕರೆದೊಯ್ದು ಅಲ್ಲಿ ಮಾದಕ ದ್ರವ್ಯ ಸೇವಿಸಿ ಲೈಂಗಿಕ ದೌರ್ಜನ್ಯವೆಸಗಿದ್ದಾರೆ ಎಂದು ಆರೋಪಿಸಿದ್ದಾರೆ.