ಮಂಡ್ಯ : ಅನ್ಯ ರಾಜ್ಯದ ದೇವಾಲಯಕ್ಕೆ ಹೋಗಿದ್ದ ಸುಮಾರು 43 ಭಕ್ತರಲ್ಲಿ ಕೊರೊನಾ ಕಾಣಿಸಿಕೊಂಡಿದೆ.
ಜಿಲ್ಲೆಯ ಚಂದಗಾಲು ಹಾಗೂ ಅರಕೆರೆ ಗ್ರಾಮದಿಂದ ಸುಮಾರು 120 ಭಕ್ತರು ತಮಿಳುನಾಡಿನಲ್ಲಿರುವ ಓಂ ಶಕ್ತಿ ದೇವಾಲಯಕ್ಕೆ ತೆರಳಿದ್ದರು. ಈ ಪೈಕಿ ಇಂದು 43 ಜನರಲ್ಲಿ ಸೋಂಕು ಕಾಣಿಸಿಕೊಂಡಿದೆ.
120 ಜನರು ಒಟ್ಟುಗೂಡಿ ಓಂ ಶಕ್ತಿ ದೇವಾಲಯಕ್ಕೆ ತೆರಳಿದ್ದರು. ಅಲ್ಲಿ ದರ್ಶನ ಪಡೆದು ಆ ನಂತರ ಜಿಲ್ಲೆಗೆ ಆಗಮಿಸಿದ್ದರು. ಪ್ರವಾಸ ಮುಗಿಸಿಕೊಂಡು ಬಂದಿದ್ದ ಎಲ್ಲ ಭಕ್ತರನ್ನು ಕ್ವಾರಂಟೈನ್ ಗೆ ಒಳಪಡಿಸಿ ಕೊರೊನಾ ಪರೀಕ್ಷೆ ಮಾಡಲಾಗಿತ್ತು.
ಇಂದು ಪರೀಕ್ಷೆಯ ವರದಿ ಬಂದಿದ್ದು, 43 ಜನರಲ್ಲಿ ಸೋಂಕು ಇರುವುದು ಖಚಿತವಾಗಿದ್ದು. ಸೋಮವಾರ 33 ಜನರಲ್ಲಿ ಸೋಂಕು ಇರುವುದಾಗಿ ತಿಳಿದು ಬಂದಿತ್ತು.
ದೇವರ ದರ್ಶನಕ್ಕೆ ಹೋಗಿದ್ದವರಲ್ಲಿ ಸೋಂಕು ಕಾಣಿಸಿಕೊಳ್ಳುತ್ತಿರುವ ಹಿನ್ನೆಲೆಯಲ್ಲಿ ಎಲ್ಲರನ್ನು ಸದ್ಯ ಶ್ರೀರಂಗಪಟ್ಟಣದ ಮೆಟ್ರಿಕ್ ಪೂರ್ವ ಬಾಲಕರ ವಸತಿ ಕೊಠಡಿಯಲ್ಲಿ ಕ್ವಾರಂಟೈನ್ ಮಾಡಲಾಗಿದೆ. ಇನ್ನೂ ಕೆಲವರ ವರದಿ ಬರುವುದು ಬಾಕಿಯಿದ್ದು, ಸೋಂಕಿತರ ಸಂಖ್ಯೆ ಹೆಚ್ಚಾಗಬಹುದು ಎನ್ನಲಾಗಿದೆ.