ಪಡಿತರ ಚೀಟಿದಾರರಿಗೆ ಗುಡ್ ನ್ಯೂಸ್ ಒಂದು ಇಲ್ಲಿದೆ. 2024ರ ವೇಳೆಗೆ ಎಲ್ಲ ನ್ಯಾಯಬೆಲೆ ಅಂಗಡಿಗಳಲ್ಲೂ ಸಾರವರ್ಧಿತ ಅಕ್ಕಿ ಲಭ್ಯವಾಗಲಿದ್ದು, ಇದರಿಂದ ರಕ್ತ ಹೀನತೆ ಮತ್ತಿತರ ಸಮಸ್ಯೆಗಳಿಗೆ ಒಂದಷ್ಟು ಪರಿಹಾರ ಸಿಗಲಿದೆ.
ಶಿವಮೊಗ್ಗದಲ್ಲಿ ಈ ಕುರಿತು ಮಾತನಾಡಿರುವ ದೆಹಲಿಯ ಪಾಥ್ ಸಂಸ್ಥೆಯ ಸಂಪನ್ಮೂಲ ವ್ಯಕ್ತಿ ಸತ್ಯವ್ರತ ಪಧಿ, ಮಾಲ್ ಗಳು ಹಾಗೂ ಅಕ್ಕಿ ಸರಬರಾಜು ಕೇಂದ್ರಗಳ ಮೂಲಕವೂ ಗ್ರಾಹಕರಿಗೆ ಸಾರ ವರ್ಧಿತ ಅಕ್ಕಿಯನ್ನು ಸುಲಭವಾಗಿ ಒದಗಿಸುವ ಗುರಿ ಹೊಂದಲಾಗಿದೆ ಎಂದು ತಿಳಿಸಿದರು.
ಅಕ್ಕಿ ಚೀಲದ ಮೇಲೆ +F ಚಿನ್ನೆ ಇದ್ದರೆ ಅದನ್ನು ಸಾರವರ್ಧಕ ಅಕ್ಕಿ ಎಂದು ಗುರುತಿಸಬಹುದು ಎಂದು ತಿಳಿಸಿದ ಅವರು, ಹಾಲು, ಉಪ್ಪು, ಎಣ್ಣೆ, ಗೋಧಿ ಹಿಟ್ಟು ಮುಂತಾದ ಆಹಾರ ಸಾಮಗ್ರಿಗಳಲ್ಲಿ ಕಬ್ಬಿನಾಂಶ, ವಿಟಮಿನ್ ಪೋಷಕಾಂಶಗಳನ್ನು ಸೂಕ್ತ ಪ್ರಮಾಣದಲ್ಲಿ ಮಿಶ್ರಣ ಮಾಡಿ ಮಧ್ಯಾಹ್ನದ ಬಿಸಿಯೂಟದಲ್ಲಿ ನೀಡಲಾಗುವುದು ಎಂದು ತಿಳಿಸಿದರು.