ಅಮೆರಿಕದ ಮಾಜಿ ಅಧ್ಯಕ್ಷ ಬಿಲ್ ಕ್ಲಿಂಟನ್ ರಕ್ತ ಸೋಂಕಿನ ಕಾರಣದಿಂದ ಕ್ಯಾಲಿಫೋರ್ನಿಯಾದಲ್ಲಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಹಿಂದಿನ ಹೃದಯದ ತೊಂದರೆ ಅಥವಾ ಕೋವಿಡ್ -19 ಗೆ ಸಂಬಂಧಿಸಿದ ಸಮಸ್ಯೆಯಲ್ಲ. ಅವರಿಗೆ ರಕ್ತ ಸೋಂಕಿನಿಂದ ಅನಾರೋಗ್ಯ ಉಂಟಾದ ಹಿನ್ನಲೆಯಲ್ಲಿ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ.
ಕ್ಯಾಲಿಫೋರ್ನಿಯಾದ ಇರ್ವಿನ್ ಮೆಡಿಕಲ್ ಸೆಂಟರ್ ನಲ್ಲಿ ಬಿಲ್ ಕ್ಲಿಂಟನ್ ಅವರಿಗೆ ಚಿಕಿತ್ಸೆ ನೀಡುವ ವೈದ್ಯರು ಹೇಳುವ ಪ್ರಕಾರ, ಕ್ಲಿಂಟನ್(75) ತೀವ್ರ ನಿಗಾ ಘಟಕದಲ್ಲಿದ್ದು, ಉಸಿರಾಟದ ತೊಂದರೆ ಇಲ್ಲ ಎಂದು ಹೇಳಿದ್ದಾರೆ.
ಅವರು ಚೇತರಿಸಿಕೊಳ್ಳುತ್ತಿದ್ದು, ಉತ್ಸಾಹದಲ್ಲಿದ್ದಾರೆ. ವೈದ್ಯರು, ದಾದಿಯರು ಮತ್ತು ಸಿಬ್ಬಂದಿಗೆ ಅತ್ಯುತ್ತಮವಾದ ಆರೈಕೆಯನ್ನು ನೀಡುತ್ತಿರುವವರಿಗೆ ಕೃತಜ್ಞರಾಗಿದ್ದಾರೆ ಎಂದು ಕ್ಲಿಂಟನ್ ವಕ್ತಾರ ಏಂಜೆಲ್ ಯುರೇನಾ ಟ್ವಿಟರ್‌ನಲ್ಲಿ ತಿಳಿಸಿದ್ದಾರೆ.
ಕ್ಲಿಂಟನ್‌ನ ವೈದ್ಯಾಧಿಕಾರಿಗಳಾದ ಡಾ.ಅಲ್ಪೇಶ್ ಅಮೀನ್ ಮತ್ತು ಡಾ. ಲಿಸಾ ಬಾರ್ಡಕ್ ಅವರು ಹೇಳಿಕೆಯಲ್ಲಿ, ಕ್ಲಿಂಟನ್ ಆರೋಗ್ಯದ ಮೇಲ್ವಿಚಾರಣೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಆರೋಗ್ಯವಾಗಿದ್ದಾರೆ. ಎರಡು ದಿನಗಳ ಚಿಕಿತ್ಸೆಯ ನಂತರ, ಅವರ ಬಿಳಿ ರಕ್ತ ಕಣಗಳ ಎಣಿಕೆ ಕಡಿಮೆಯಾಗುತ್ತಿದೆ. ಅವರು ಚಿಕಿತ್ಸೆಗೆ ಉತ್ತಮವಾಗಿ ಪ್ರತಿಕ್ರಿಯಿಸುತ್ತಿದ್ದಾರೆ. ಗುಣಮುಖರಾಗಿ ಶೀಘ್ರದಲ್ಲೇ ಮನೆಗೆ ಹೋಗುತ್ತಾರೆ ಎಂದು ನಾವು ಭಾವಿಸುತ್ತೇವೆ ಎಂದು ಮಾಹಿತಿ ನೀಡಿದ್ದಾರೆ.