ಉತ್ತರ ಪ್ರದೇಶದ ಮಾಜಿ ಗವರ್ನರ್ ಅಜೀಜ್ ಖುರೇಷಿ ಅವರ ವಿರುದ್ಧ ದೇಶದ್ರೋಹ ಕೇಸ್ ದಾಖಲಾಗಿದೆ. ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮತ್ತು ಅವರ ಸರ್ಕಾರದ ಮೇಲೆ ಅವಹೇಳನಕಾರಿಯಾಗಿ ಮಾತನಾಡಿದ್ದಕ್ಕೆ, ಉತ್ತರ ಪ್ರದೇಶದ ಪೊಲೀಸರು ಖುರೇಷಿ ಅವರ ಮೇಲೆ ಕೇಸನ್ನು ದಾಖಲಿಸಿದ್ದಾರೆ.
ಖುರೇಷಿ ಅವರು ಅಜಂ ಖಾನ್ ಅವರ ಮನೆಗೆ ತೆರಳಿ, ರಾಂಪುರದ ಶಾಸಕಿ ಹಾಗು ಖಾನ್ ಅವರ ಪತ್ನಿ ತಂಜೀಮ್ ಫಾತಿಮಾ ಅವರನ್ನು ಕಾಣಲು ಹೋದಾಗ ಈ ರೀತಿ ಮಾತನಾಡಿದ್ದಾರೆ ಎನ್ನಲಾಗಿದೆ. ಅಲ್ಲಿ ಅವರು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರನ್ನು ದೆವ್ವ ಮತ್ತು ರಕ್ತ ಕುಡಿಯುವ ರಾಕ್ಷಸರಿಗೆ ಹೋಲಿಸಿದ್ದಾರೆ.
ಸ್ಥಳೀಯ ಬಿಜೆಪಿ ಕಾರ್ಯಕರ್ತ ಆಕಾಶ್ ಸಕ್ಸೆನಾ ಅವರ ದೂರಿನ ಆಧಾರದ ಮೇಲೆ ಖುರೇಷಿ ಅವರ ಮೇಲೆ ಕೇಸ್ ದಾಖಲಿಸಲಾಗಿದೆ. ಕೇಸ್ ಸಿವಿಲ್ ಲೈನ್ಸ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.