ಆರ್ಥಿಕ ಸಂಕಷ್ಟದಿಂದ ಕಂಗೆಟ್ಟಿರುವ ಶ್ರೀಲಂಕಾದಲ್ಲಿ ಆಡಳಿತ ಪಕ್ಷದ ನಾಯಕರಿಗೆ ಸಾರ್ವಜನಿಕರಿಂದ ತೀವ್ರ ವಿರೋಧ ವ್ಯಕ್ತವಾಗುತ್ತಿದೆ. ಇದರ ಮಧ್ಯೆ ಸಚಿವರಾಗಿರುವ ಶ್ರೀಲಂಕಾ ಕ್ರಿಕೆಟ್ ತಂಡದ ಮಾಜಿ ನಾಯಕ ಅರ್ಜುನ ರಣತುಂಗಾ ಅವರ ಸಹೋದರ ಹೊಸ ಸಂಕಷ್ಟವೊಂದಕ್ಕೆ ಸಿಲುಕಿದ್ದಾರೆ.
ಸುಲಿಗೆ ಪ್ರಕರಣವೊಂದರಲ್ಲಿ ಅರ್ಜುನ ರಣತುಂಗಾ ಅವರ ಸಹೋದರ ಪ್ರಸನ್ನ ರಣತುಂಗಾ ಅವರಿಗೆ ಶ್ರೀಲಂಕಾ ಹೈಕೋರ್ಟ್ ಎರಡು ವರ್ಷಗಳ ಜೈಲು ಶಿಕ್ಷೆ ವಿಧಿಸಿ ತೀರ್ಪು ನೀಡಿದೆ. ಉದ್ಯಮಿಯೊಬ್ಬರನ್ನು ಬೆದರಿಸಿ ಸುಲಿಗೆ ಮಾಡಿದ್ದ ಪ್ರಕರಣ ಪ್ರಸನ್ನ ರಣತುಂಗಾ ವಿರುದ್ಧ 2015ರಲ್ಲಿ ದಾಖಲಾಗಿತ್ತು.
ಇದರ ವಿಚಾರಣೆ ನಡೆದು ಈಗ ತೀರ್ಪು ಹೊರಬಿದ್ದಿದ್ದು, ಪ್ರಸನ್ನ ರಣತುಂಗಾ ವಿರುದ್ಧದ ಆರೋಪ ದೃಢಪಟ್ಟ ಕಾರಣ ಜೈಲು ಶಿಕ್ಷೆ ವಿಧಿಸಲಾಗಿದೆ. ಅಲ್ಲದೆ 53 ಲಕ್ಷ ರೂಪಾಯಿ ದಂಡ ಮತ್ತು ಸಂತ್ರಸ್ತ ಉದ್ಯಮಿಗೆ 2.14 ಲಕ್ಷ ರೂಪಾಯಿ ದಂಡ ಪಾವತಿಸಲೂ ಸಹ ನ್ಯಾಯಾಲಯ ಸೂಚಿಸಿದೆ.