ನವದೆಹಲಿ: ಭ್ರಷ್ಟಾಚಾರ ಪ್ರಕರಣದಲ್ಲಿ ಪಂಜಾಬ್ ಮಾಜಿ ಸಚಿವ ಮತ್ತು ಕಾಂಗ್ರೆಸ್ ನಾಯಕ ಸಾಧು ಸಿಂಗ್ ಧರಂಸೋತ್ ಅವರನ್ನು ರಾಜ್ಯ ವಿಜಿಲೆನ್ಸ್ ಬ್ಯೂರೋ(ವಿಬಿ) ಇಂದು ಬೆಳ್ಳಂಬೆಳಗ್ಗೆ ಬಂಧಿಸಿದೆ.
ಫತೇಘರ್ ಸಾಹಿಬ್ ಜಿಲ್ಲೆಯ ಅಮ್ಲೋಹ್ ನಿಂದ ಬೆಳಗಿನ ಜಾವ 3 ಗಂಟೆ ಸುಮಾರಿಗೆ ಧರಂಸೋತ್ ಅವರನ್ನು ಬಂಧಿಸಲಾಯಿತು. ಅವರು ಅಮರಿಂದರ್ ಸಿಂಗ್ ಸರ್ಕಾರದಲ್ಲಿ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವರಾಗಿ ಸೇವೆ ಸಲ್ಲಿಸಿದ್ದರು.
ಅರಣ್ಯ ಸಚಿವರಾಗಿದ್ದ ಅವಧಿಯಲ್ಲಿ, ಮರಗಳನ್ನು ಕಡಿಯುವುದಕ್ಕೆ ಬದಲಾಗಿ ಲಂಚ ತೆಗೆದುಕೊಂಡಿದ್ದರು. ಸಂಸ್ಥೆಯು ಕಳೆದ ವಾರ ಮೊಹಾಲಿ ಜಿಲ್ಲಾ ಡಿಎಫ್‌ಒ ಬಂಧಿಸಿತ್ತು, ವಿಚಾರಣೆಯ ಸಮಯದಲ್ಲಿ, ಯಾವುದೇ ಮರವನ್ನು ಕಡಿಯುವ ಮೊದಲು ಧರಂಸೋತ್ ಗೆ ಲಂಚ ನೀಡಲಾಯಿತು ಎಂದು ಡಿಎಫ್‌ಒ ಹೇಳಿದ್ದರು.
ಪ್ರತಿ ಮರನ್ನು ಕಡಿಯಲು ಧರಂಸೋತ್ 500 ರೂಪಾಯಿ ಲಂಚ ಪಡೆಯುತ್ತಿದ್ದ ಎಂದು ಅವರು ವಿಚಾರಣೆ ವೇಳೆ ಬಹಿರಂಗಪಡಿಸಿದ್ದಾರೆ. ಈ ವಿಚಾರಣೆಯ ಆಧಾರದ ಮೇಲೆ ವಿಜಿಲೆನ್ಸ್ ಬ್ಯೂರೋದಿಂದ ಧರ್ಮಸೋಟ್ ಅವರನ್ನು ಬಂಧಿಸಲಾಗಿದೆ.
ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ನೇತೃತ್ವದ ಆಪ್ ಸರ್ಕಾರ ಇತ್ತೀಚೆಗೆ ಭ್ರಷ್ಟಾಚಾರ ಪ್ರಕರಣದಲ್ಲಿ ಆರೋಗ್ಯ ಸಚಿವ ಡಾ. ವಿಜಯ್ ಸಿಂಗ್ಲಾ ಅವರನ್ನು ವಜಾಗೊಳಿಸಿದೆ.