
ಇಂದು ಮತಗಟ್ಟೆ ತೆರೆಯುತ್ತಿದ್ದಂತೆ ಪ್ರಧಾನಿ ನರೇಂದ್ರ ಮೋದಿ ಮೊದಲಿಗೆ ಮತ ಚಲಾಯಿಸಿದರು. ತದ ನಂತರ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಗಾಲಿ ಕುರ್ಚಿಯಲ್ಲಿ ಬಂದು ಮತ ಚಲಾಯಿಸಿದರು. ರಾಷ್ಟ್ರಪತಿ ಚುನಾವಣಾ ಸಮಯದಲ್ಲೂ ಕಾಂಗ್ರೆಸ್ ಸಂಸದ ಹಾಗೂ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಗಾಲಿ ಕುರ್ಚಿಯಲ್ಲೇ ಬಂದು ಮತ ಚಲಾಯಿಸಿದ್ದಾರೆ.
ಮನಮೋಹನ್ ಸಿಂಗ್ ಅವರು ವ್ಹೀಲ್ ಚೇರ್ ಸಹಾಯದಿಂದ ಸಂಸತ್ ಭವನದ ಒಳಗೆ ಬರುತ್ತಿದ್ದ ಹಾಗೆಯೇ ಮೊದಲಿಗೆ ಎರಡನೇ ಮಹಡಿಯಲ್ಲಿರುವ ರೂಮ್ ನಂಬರ್ 63ಕ್ಕೆ ಕರೆದೊಯ್ಯಲಾಯಿತು. ಆಗ ಅವರಿಗೆ ಸಹಾಯಕ್ಕೆ ಬಂದಿದ್ದು ನಾಲ್ವರು ಅಧಿಕಾರಿಗಳು. ಮತಗಟ್ಟೆಯ ಬಳಿ ಬಂದ ಮೇಲೆ ಮತ ಪತ್ರವನ್ನ ಬಾಕ್ಸ್ ಒಳಗೆ ಹಾಕುವಾಗಲೂ, ಅಧಿಕಾರಿಗಳು ಮನಮೋಹನ್ ಸಿಂಗ್ ಅವರ ಸಹಾಯಕ್ಕೆ ಬಂದರು.
ಕಳೆದ ವರ್ಷ ಮನಮೋಹನ್ ಸಿಂಗ್ ಅವರು ಜ್ವರ ಮತ್ತು ದೈಹಿಕ ದೌರ್ಬಲ್ಯದಿಂದ ಏಮ್ಸ್‌ಗೆ ದಾಖಲಾಗಿದ್ದರು. ಅವರು ಹೃದ್ರೋಗ ತಜ್ಞ ನಿತೀಶ್ ನಾಯಕ್ ಅವರ ಬಳಿ ಚಿಕಿತ್ಸೆ ಪಡೆಯುತ್ತಿದ್ದರು. 89 ವರ್ಷದ ಮಾಜಿ ಪ್ರಧಾನಿಯವರ ಅನಾರೋಗ್ಯದ ಕಾರಣ ಚಳಿಗಾಲದ ಅಧಿವೇಶನದಲ್ಲಿಯೂ ಸಂಸತ್ತಿನತ್ತ ಹೆಜ್ಜೆ ಹಾಕಿರಲಿಲ್ಲ. ಆದರೆ ಇಂದು ಉಪರಾಷ್ಟ್ರಪತಿ ಚುನಾವಣೆ ಪ್ರಯುಕ್ತ, ಸಂಸತ್ತಿಗೆ ಬಂದು ಮತ ಚಲಾಯಿಸಿದ್ದು ವಿಶೇಷವಾಗಿತ್ತು.